
ಹರಿದ್ವಾರ: ಯೋಗಗುರು ಬಾಬಾ ರಾಮದೇವ್ ಐಷಾರಾಮಿ ಕಾರನ್ನು ಸ್ವತಃ ತಾವೇ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋ ಭಾರಿ ವೈರಲ್ ಆಗಿದೆ.
ಬಾಬಾ ರಾಮ್ ದೇವ್ ಲ್ಯಾಂಡ್ ರೋವರ್ ಡಿಫೆಂಡರ್ 130 ಐಷಾರಾಮಿ ಕಾರನ್ನು ಹರಿದ್ವಾರದ ರಸ್ತೆಯಲ್ಲಿ ತಾವೇ ಸ್ವತಃ ಡ್ರೈವ್ ಮಾಡಿಕೊಂಡು ತೆರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬರೋಬ್ಬರಿ 1.5 ಕೋಟಿ ರೂ. ಮೌಲ್ಯದ ಈ ಕಾರನ್ನು ಯೋಗ ಗುರು ಬಾಬಾ ರಾಮದೇವ್ ಗೆ ಗಿಫ್ಟ್ ಆಗಿ ನೀಡಿರುವುದು ಎಂದು ಹೇಳಲಾಗುತ್ತಿದೆ. ಪತಂಜಲಿ ಆಯುರ್ವೇದ ಸಹ ಸಂಸ್ಥಾಪಕ ಯೋಗಗುರು ಬಾಬಾರಾಮ್ ದೇವ್ ಅವರ ಐಷಾರಾಮಿ ಕಾರಿನ ಪ್ರಯಾಣ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.