ಲೋ ಬಿಪಿ ಅನೇಕ ಜನರನ್ನು ಕಾಡುವ ಸಮಸ್ಯೆಗಳಲ್ಲೊಂದು. ಜೀವನಶೈಲಿಯಲ್ಲಿನ ಲೋಪ ದೋಷಗಳು ಮತ್ತು ಕಳಪೆ ಆಹಾರ ಪದ್ಧತಿಯಿಂದಾಗಿ ಜನರು ಇಂತಹ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆರೋಗ್ಯ ತಜ್ಞರ ಪ್ರಕಾರ ಯಾವುದೇ ಆರೋಗ್ಯವಂತ ವ್ಯಕ್ತಿಯ ರಕ್ತದೊತ್ತಡವು ಸಾಮಾನ್ಯವಾಗಿ 120/80 mmHg ಆಗಿರಬೇಕು. ಈ ರಕ್ತದೊತ್ತಡವು 90/60 mmHg ಗಿಂತ ಕಡಿಮೆಯಾದರೆ ಅದನ್ನು ಲೋ ಬಿಪಿ ಎಂದು ಕರೆಯಲಾಗುತ್ತದೆ.
ಪ್ರಾಣಕ್ಕೇ ಅಪಾಯ…!
ಕಡಿಮೆ ರಕ್ತದೊತ್ತಡವಿದ್ದರೆ ತಲೆತಿರುಗುವಿಕೆ, ತಲೆನೋವು, ವಾಂತಿ, ಆಯಾಸ ಮತ್ತು ದೌರ್ಬಲ್ಯದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸರಿಯಾದ ಸಮಯದಲ್ಲಿ ಅದನ್ನು ನಿಯಂತ್ರಿಸದಿದ್ದರೆ ರೋಗಿಯು ಹೃದಯಾಘಾತಕ್ಕೂ ಒಳಗಾಗಬಹುದು.
ಲೋ ಬಿಪಿ ಸಮಸ್ಯೆ ಇದ್ದರೆ ಗಾಬರಿಪಡುವ ಅಗತ್ಯವಿಲ್ಲ. ಕಡಿಮೆ ರಕ್ತದೊತ್ತಡವನ್ನು ನಿಯಂತ್ರಿಸಲು ಸುಲಭದ ಮಾರ್ಗಗಳಿವೆ. ಮನೆಯಲ್ಲೇ ಇರುವ ಈ ಪದಾರ್ಥಗಳನ್ನು ಸೇವನೆ ಮಾಡುವ ಮೂಲಕ ಸಮಸ್ಯೆಯನ್ನು ನಿವಾರಿಸಬಹುದು.
ಒಣದ್ರಾಕ್ಷಿ – ಕಡಿಮೆ ರಕ್ತದೊತ್ತಡವನ್ನು ನಿಯಂತ್ರಿಸಲು ಒಣದ್ರಾಕ್ಷಿಗಳನ್ನು ಸೇವಿಸಬಹುದು. ರಾತ್ರಿ ಮಲಗುವ ಮುನ್ನ 4-5 ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಈ ಒಣದ್ರಾಕ್ಷಿಯನ್ನು ಸೇವಿಸಿ. ನೆನೆಸಿಟ್ಟ ನೀರನ್ನೂ ಕುಡಿಯಬಹುದು. ಹೀಗೆ ಮಾಡುವುದರಿಂದ ರಕ್ತದೊತ್ತಡ ಸಾಮಾನ್ಯವಾಗಿರುತ್ತದೆ.
ಅಶ್ವಗಂಧ – ಲೋ ಬಿಪಿ ನಿಯಂತ್ರಿಸಲು ಅಶ್ವಗಂಧದ ಬಳಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇಂತಹ ಹಲವು ಪೋಷಕಾಂಶಗಳು ಇದರಲ್ಲಿದ್ದು, ದೇಹದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಒಂದು ಚಮಚ ಅಶ್ವಗಂಧ ಪುಡಿಯನ್ನು ಅರ್ಧ ಲೋಟ ಉಗುರು ಬೆಚ್ಚಗಿನ ನೀರಿಗೆ ಬೆರೆಸಿ ಸೇವಿಸಿ. ಈ ಪುಡಿಯನ್ನು ದಿನಕ್ಕೆರಡು ಬಾರಿ ಸೇವಿಸುವುದರಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆ.
ತುಳಸಿ ಎಲೆಗಳು – ತುಳಸಿ ಎಲೆಗಳು ಕೂಡ ಕಡಿಮೆ ರಕ್ತದೊತ್ತಡದ ದಮಸ್ಯೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಮೆಗ್ನೀಸಿಯಮ್ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಇಂತಹ ಅನೇಕ ಆ್ಯಂಟಿ ಒಕ್ಸಿಡೆಂಟ್‌ಗಳು ಇದರಲ್ಲಿ ಕಂಡುಬರುತ್ತವೆ. ಇದು ಸಾಮಾನ್ಯ ಬಿಪಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆರೋಗ್ಯ ತಜ್ಞರ ಪ್ರಕಾರ ಬಿಪಿ ಲೋ ಆದಾಗ 4 ತುಳಸಿ ಎಲೆಗಳನ್ನು ಸ್ವಚ್ಛಗೊಳಿಸಿ ನಿಧಾನವಾಗಿ ಜಗಿಯಬೇಕು. ಹೀಗೆ ಮಾಡುವುದರಿಂದ ಬಿಪಿ ಕಂಟ್ರೋಲ್‌ಗೆ ಬರುತ್ತದೆ.