ಉಡುಪಿ : ಮೊಬೈಲ್ ಆಪ್ ನಲ್ಲಿ ವ್ಯಾಪಾರಕ್ಕಾಗಿ ಸಾಲ ಪಡೆದು, ಅದನ್ನು ತುಂಬಲಾಗದೆ ಮನನೊಂದು ಯುವಕನೊಬ್ಬ ಸಾಲ ಬಾಕಿ ಇದೆ ಎಂದು ಕರೆ ಬಂದರೆ ಆತ ಸತ್ತ ಎಂದು ಹೇಳಿ…..ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಕುಂದಾಪುರದ ಹೆಮ್ಮಾಡಿಯಲ್ಲಿ ನಡೆದಿದೆ. ಎಂ ಎನ್ ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಘ್ನೇಶ್ ಎಂಬ ವ್ಯಕ್ತಿ ವ್ಯಾಪಾರ ಮಾಡುವುದಕ್ಕಾಗಿ ಸ್ನೇಹಿತರೊಂದಿಗೆ ಸೇರಿ ಮೊಬೈಲ್ ಆಪ್ ನಲ್ಲಿ ಲೋನ್ ಪಡೆದಿದ್ದಾನೆ. ಆದರೆ, ಆತನಿಗೆ ಸಾಲ ಪಾವತಿ ಮಾಡಲು ಆಗಿಲ್ಲ.
ಸಮುದಾಯದಲ್ಲಿ ಹರಡ್ತಿದ್ಯಾ ಒಮಿಕ್ರಾನ್, ಆರೋಗ್ಯ ಸಚಿವ ಹೇಳಿದ್ದೇನು..?
ಇತ್ತ ಅವರ ವ್ಯವಹಾರ ಕೂಡ ಸರಿಯಾಗಿ ನಡೆದಿಲ್ಲ. ಹೀಗಾಗಿ ಆತನಿಗೆ ಸರಿಯಾಗಿ ಲೋನ್ ತುಂಬಲು ಅಸಾಧ್ಯವಾಗಿದೆ. ಇದರಿಂದಾಗಿ ತೀವ್ರವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ಡೆತ್ ನೋಟ್ ಬರೆದಿಟ್ಟು ನನ್ನ ಸಾವಿಗೆ ನಾನೇ ಕಾರಣ. ನಾನು ಮಾಡುವ ಕಂಪನಿಗೆ ನಾನು ಸತ್ತ ಸುದ್ದಿ ತಿಳಿಸಿ. ಅಲ್ಲದೆ, ಲೋನ್ ಬಾಕಿ ಇದೆ ಎಂದು ನನ್ನ ಫೋನ್ ಗೆ ಕರೆ ಬಂದರೆ ಆತ ಸತ್ತಿದ್ದಾನೆ. ಆತ ಯಾರು ಎಂಬುವುದೇ ನಮಗೆ ಗೊತ್ತಿಲ್ಲ ಎಂದು ಹೇಳಿ ಎಂದು ಡೆತ್ ನೋಟ್ ಬರೆದಿಟ್ಟಿದ್ದಾನೆ.
ಡೆತ್ ನೋಟ್ ನಲ್ಲಿ ತನ್ನ ಎಟಿಎಂ ಪಾಸ್ ವರ್ಡ್ ನ್ನು ಕೂಡ ಉಲ್ಲೇಖಿಸಿದ್ದಾನೆ. ಆ ನಂತರ ಮನೆಯ ಮುಂದಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಕುಂದಾಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.