ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ ಲೈವ್ ಸರ್ಕಸ್ ನಲ್ಲೇ ಹುಲಿಯೊಂದು ತರಬೇತುದಾರನ ಮೇಲೆ ದಾಳಿ ಮಾಡಿದೆ. ಈ ಭಯಾನಕ ಘಟನೆ ಇಟಲಿಯಲ್ಲಿ ನಡೆದಿದೆ.
ಸರ್ಕಸ್ ತರಬೇತುದಾರನನ್ನು ಹುಲಿ ನೆಲಕ್ಕೆ ಎಳೆದೊಯ್ದ ಭಯಾನಕ ಕ್ಷಣವನ್ನು ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡಿದ್ದು ಬೆಚ್ಚಿಬೀಳಿಸಿದೆ.
ವಿಡಿಯೋದಲ್ಲಿ ಸರ್ಕಸ್ ತರಬೇತುದಾರ ಮತ್ತೊಂದು ಹುಲಿಯ ಮೇಲೆ ಗಮನ ಕೇಂದ್ರೀಕರಿಸಿದ್ದಾಗ ಎರಡನೇ ಹುಲಿ ಅವನ ಮೇಲೆ ಹಿಂದಿನಿಂದ ಧಾವಿಸಿ ದಾಳಿ ಮಾಡುತ್ತದೆ. 31 ವರ್ಷದ ತರಬೇತುದಾರ ಇವಾನ್ ಓರ್ಫೀ ನೋವಿನಿಂದ ಕಿರುಚುತ್ತಾ ಹುಲಿಯ ಹಿಡಿತದಿಂದ ತನ್ನನ್ನು ಬಿಡಿಸಿಕೊಳ್ಳಲು ಹೆಣಗಾಡುತ್ತಿರುವಾಗ, ಹುಲಿ ಅವನ ಕುತ್ತಿಗೆ ಮತ್ತು ಕಾಲುಗಳ ಮೇಲೆ ಕಚ್ಚುತ್ತದೆ. ಅಷ್ಟರಲ್ಲಿ ಸಭಿಕರ ಕಿರುಚಾಟ ಕೇಳಿಸುತ್ತದೆ.
ಅದೃಷ್ಟವಶಾತ್ ತರಬೇತುದಾರ ಓರ್ಫೀ ಹುಲಿಯ ಹಿಡಿತದಿಂದ ತಪ್ಪಿಸಿಕೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿದ್ದಾರೆ. ಏತನ್ಮಧ್ಯೆ ಪ್ರದರ್ಶನದ ನಂತರ ಹುಲಿಯನ್ನು ಪ್ರತ್ಯೇಕಿಸಲಾಗಿದೆ.
https://twitter.com/LaSamy65280885/status/1609149329796743169?ref_src=twsrc%5Etfw%7Ctwcamp%5Etweetembed%7Ctwterm%5E1609149329796743169%7Ctwgr%5E60367816231c09530388fdb4f943c501b8fefbbf%7Ctwcon%5Es1_&ref_url=https%3A%2F%2Fwww.latestly.com%2Fsocially%2Fsocial-viral%2Ftiger-attacks-circus-trainer-hauls-him-to-floor-and-bites-his-neck-during-a-live-performance-in-italy-crowd-screams-in-shock-watch-viral-video-4665543.html