ಲೈವ್ ನಲ್ಲಿರುವಾಗಲೇ ಕುಸಿದುಬಿದ್ದ ವರದಿಗಾರ್ತಿ…! ವಿಡಿಯೋ ವೈರಲ್ 12-11-2022 10:05AM IST / No Comments / Posted In: Latest News, Live News, International ನ್ಯೂಸ್ ಚಾನೆಲ್ ನಲ್ಲಿ ಕೆಲಸ ಮಾಡುವ ವರದಿಗಾರರು ಇತ್ತೀಚೆಗೆ ಲೈವ್ ನಲ್ಲೇ ಕುಸಿದುಬೀಳುತ್ತಿರುವುದು ಹಾಗು ಸಾವನ್ನಪ್ಪುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಅಂಥದ್ದೇ ಆಘಾತಕಾರಿ ಘಟನೆ ಬ್ರಿಜಿಲ್ ನಲ್ಲಿ ನಡೆದಿದೆ. ಟಿವಿ ವರದಿಗಾರ್ತಿ ವನೆಸ್ಸಾ ಮೆಡಿರೋಸ್ ಲೈವ್ ನೀಡುತ್ತಿರುವಾಗಲೇ ಕುಸಿದುಬಿದ್ದಿದ್ದಾರೆ. ಸ್ಟುಡಿಯೋದಲ್ಲಿದ್ದ ನಿರೂಪಕರು ಕೂಡ ಈ ಕ್ಷಣ ಕೆಲಕಾಲ ತಬ್ಬಿಬ್ಬಾದರು. ಈ ವಿಡಿಯೋ ಇದೀಗ ವೈರಲ್ ಆಗ್ತಿದೆ. ಈ ವಿಡಿಯೋ ನೋಡಿದ ಕೆಲವರು ಸುದ್ದಿ ವರದಿಗಾರರ ಕೆಲಸವು ಒತ್ತಡದಿಂದ ಕೂಡಿದೆ ಎಂದಿದ್ದಾರೆ. ಇತ್ತೀಚಿಗೆ ಇದು ಸಾಮಾನ್ಯ ಎಂದು ಸಹ ಹಲವರು ಕಮೆಂಟ್ ಮಾಡಿದ್ದಾರೆ. ಆದರೆ ಇತರರು ಹವಾಮಾನ ಬದಲಾವಣೆಯನ್ನು ದೂಷಿಸುತ್ತಿದ್ದಾರೆ. ಈ ರೀತಿಯ ಘಟನೆಗಳು ಸಂಭವಿಸಿದಾಗ ಅದರಲ್ಲಿ ಭಾಗಿಯಾಗಿರುವ ಎಲ್ಲರಿಗೂ ಆಘಾತವಾಗುತ್ತದೆ. ಮೊದಲನೆಯದಾಗಿ ಕ್ಯಾಮರಾದಲ್ಲಿರುವ ವ್ಯಕ್ತಿ ಸ್ವತಃ ಆರೋಗ್ಯ ಮತ್ತು ಸಂಭಾವ್ಯ ಮುಜುಗರವನ್ನು ಎದುರಿಸಬೇಕಾಗುತ್ತದೆ. ಎರಡನೆಯದಾಗಿ ಸ್ಟುಡಿಯೋದಲ್ಲಿರುವ ಮತ್ತು ಕ್ಯಾಮೆರಾ ಹಿಂದಿನ ಜನರು ಸಹ ಕಕ್ಕಾಬಿಕ್ಕಿಯಾಗುತ್ತಾರೆ. ಇಡೀ ಸನ್ನಿವೇಶವನ್ನು ನೋಡುತ್ತಿರುವ ವೀಕ್ಷಕರು ಸಹ ಗಲಿಬಿಲಿಗೊಳ್ಳುವಂತಾಗುತ್ತೆ. Brazil 🇧🇷 👀Brazilian reporter Vanessa Medeiros collapses while reporting live in TV. pic.twitter.com/Iuds4Mbg4j — nikola 3 (@ronin19217435) November 10, 2022