ಸೋಂಪು ಸಾಕಷ್ಟು ಆರೋಗ್ಯಕರ ಅಂಶಗಳನ್ನು ಹೊಂದಿರುವ ಮಸಾಲೆ ಪದಾರ್ಥ. ಇದು ಪೋಷಕಾಂಶಗಳ ಖಜಾನೆ ಅಂದ್ರೂ ತಪ್ಪಾಗಲಾರದು. ಅನೇಕ ವಿಟಮಿನ್ ಮತ್ತು ಖನಿಜಗಳ ಜೊತೆಗೆ ಸಾಕಷ್ಟು ಔಷಧೀಯ ಗುಣಗಳು ಇದರಲ್ಲಿ ಕಂಡುಬರುತ್ತವೆ. ಕಬ್ಬಿಣಾಂಶ, ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಸೋಂಪಿನಲ್ಲಿವೆ. ಹಾಗಾಗಿ ಸೋಂಪು ಸೇವನೆ ಮಾಡುವುದರಿಂದ ಹೊಟ್ಟೆಯ ಸಮಸ್ಯೆಗಳು ದೂರವಾಗುತ್ತವೆ. ಪುರುಷರಿಗೆ ಸೋಂಪು ಸೇವನೆ ಬಹಳ ಅವಶ್ಯಕ. ಇದು ಪುರುಷರಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.
ವೀರ್ಯ ಸಂಖ್ಯೆ ಹೆಚ್ಚಳ: ಇತ್ತೀಚಿನ ದಿನಗಳಲ್ಲಿ ಕಡಿಮೆ ವೀರ್ಯಾಣು ಸಮಸ್ಯೆಯು ಹೆಚ್ಚಿನ ಪುರುಷರಲ್ಲಿ ಕಂಡುಬರುತ್ತಿದೆ. ಇದರಿಂದಾಗಿ ಅನೇಕ ಲೈಂಗಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪುರುಷರು ಪ್ರತಿದಿನ ಸೋಂಪು ಸೇವಿಸಿದರೆ ವೀರ್ಯದ ಗುಣಮಟ್ಟ ಸುಧಾರಿಸುತ್ತದೆ. ಇದು ಹಾರ್ಮೋನುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ.
ಕಾಮೋತ್ತೇಜಕ : ದಿನವಿಡೀ ಕಚೇರಿ ಕೆಲಸ, ಇತರ ಒತ್ತಡಗಳಿಂದಾಗಿ ಪುರುಷರಲ್ಲಿ ಲೈಂಗಿಕ ಬಯಕೆ ಕಡಿಮೆಯಾಗುತ್ತದೆ. ಆಯಾಸವೂ ಇದಕ್ಕೆ ಕಾರಣ. ಆದರೆ ಸೋಂಪಿನ ಕಾಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಶಕ್ತಿ ವರ್ಧಿಸುತ್ತದೆ. ಜೊತೆಗೆ ಇದು ಕಾಮೋತ್ತೇಜಕವಾಗಿ ಕೆಲಸ ಮಾಡುತ್ತದೆ.
ಬಂಜೆತನಕ್ಕೆ ಪರಿಹಾರ: ಪುರುಷರಲ್ಲಿ ಬಂಜೆತನದ ಸಮಸ್ಯೆ ತುಂಬಾ ಸಾಮಾನ್ಯ. ಇದರಿಂದಾಗಿ ತಂದೆಯಾಗಬೇಕೆಂಬ ಅವರ ಬಯಕೆಗೆ ಅಡ್ಡಿಯಾಗಬಹುದು. ಲೈಂಗಿಕ ಸಂಬಂಧದಲ್ಲಿ ಸಮಸ್ಯೆಗಳಾಗಬಹುದು. ಸೋಂಪನ್ನು ಸೇವನೆ ಮಾಡುವುದರಿಂದ ಪುರುಷತ್ವ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಬಂಜೆತನವನ್ನೂ ಇದು ನಿವಾರಿಸುತ್ತದೆ. ಪ್ರತಿನಿತ್ಯದ ಅಡುಗೆಗೆ ಸೋಂಪನ್ನು ಬಳಸಬಹುದು. ಅಥವಾ ಊಟವಾದ ನಂತರ ಒಂದು ಚಮಚ ಸೋಂಪಿನ ಕಾಳನ್ನು ಅಗಿದು ತಿನ್ನಬೇಕು. ಇದು ಆಹಾರದ ಜೀರ್ಣಕ್ರಿಯೆಯನ್ನೂ ಸುಧಾರಿಸುತ್ತದೆ.