ಕೆಲಸದ ಹಿಂದೆ ಓಡುವ ಜನರಿಗೆ ಸಮಯದ ಕೊರತೆ ಕಾಡ್ತಿದೆ. ವೈಯಕ್ತಿಕ ಜೀವನದ ಜೊತೆಗೆ ಪೌಷ್ಠಿಕ ಆಹಾರ ಸೇವನೆಯೂ ಸಾಧ್ಯವಾಗ್ತಿಲ್ಲ. ಇದ್ರಿಂದಾಗಿ ಅನೇಕ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಲೈಂಗಿಕ ಜೀವನದ ಮೇಲೂ ಇದು ಪರಿಣಾಮ ಬೀರುತ್ತದೆ. ವಿಟಮಿನ್ ಇ ಕೊರತೆಯಿಂದಾಗಿ ಲೈಂಗಿಕ ಜೀವನದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಲೈಂಗಿಕ ಸಾಮರ್ಥ್ಯ ಹೆಚ್ಚಿಸ ಬಯಸುವವರು ಕೆಲವೊಂದು ಆಹಾರಗಳನ್ನು ಅವಶ್ಯವಾಗಿ ಸೇವಿಸಬೇಕು.
ದೇಹವನ್ನು ಬಲಗೊಳಿಸಲು ಜೊತೆಗೆ ಲೈಂಗಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆರೋಗ್ಯಕರ ಹಾಗೂ ಪೌಷ್ಠಿಕ ಆಹಾರವನ್ನು ಸೇವಿಸಬೇಕಾಗುತ್ತದೆ. ಲೈಂಗಿಕ ಶಕ್ತಿ ಹೆಚ್ಚಿಸಲು ಒಣ ದ್ರಾಕ್ಷಿ ಅಥವಾ ನೆನೆಸಿದ ಬಾದಾಮಿಯನ್ನು ಹಾಲಿನ ಜೊತೆ ಜೇನುತುಪ್ಪ ಬೆರೆಸಿ ಪ್ರತಿದಿನ ಕುಡಿಯಬೇಕು.
ಬಾದಾಮಿ, ಒಣದ್ರಾಕ್ಷಿಯನ್ನು ನೆನೆಸಿ ಬೆಳಿಗ್ಗೆ ಉಪಹಾರದ ಜೊತೆ ಸೇವನೆ ಮಾಡುವುದ್ರಿಂದಲೂ ಲಾಭವಿದೆ.
ಹಸಿರು ತರಕಾರಿ ಹಾಗೂ ಸಿಪ್ಪೆ ಸುಲಿದ ಬೇಳೆಯನ್ನು ಚಪಾತಿ ಜೊತೆ ತಿನ್ನಬೇಕು. ಚಪಾತಿಯನ್ನು ಬೆಣ್ಣೆ ಅಥವಾ ಹಾಲಿನ ಕೆನೆ ಜೊತೆ ತಿಂದ್ರೂ ಒಳ್ಳೆಯದು.
ಆಹಾರದಲ್ಲಿ ಸಲಾಡ್ ಅವಶ್ಯವಾಗಿರಲಿ. ಬೆಳ್ಳುಳ್ಳಿ ಹಾಗೂ ಶುಂಠಿಯನ್ನು ಸಮ ಪ್ರಮಾಣದಲ್ಲಿ ಸೇವನೆ ಮಾಡಬೇಕು.
ಲೈಂಗಿಕ ಶಕ್ತಿ ಹೆಚ್ಚಿಸಲು ನೈಸರ್ಗಿಕ ಆಹಾರಗಳನ್ನು ತಿನ್ನಬೇಕು. ಮುಸುಕಿನ ಜೋಳ, ತಾಜಾ ಹಸಿರು ತರಕಾರಿಗಳು, ಸಲಾಡ್, ಅಕ್ಕಿ, ತಾಜಾ ಹಣ್ಣುಗಳು, ಒಣ ಹಣ್ಣುಗಳು, ಬ್ರೆಡ್, ಧಾನ್ಯಗಳು, ಹಾಲು, ಬೆಣ್ಣೆ, ಮೊಟ್ಟೆಯಂತಹ ಆಹಾರ ಸೇವನೆ ಮಾಡಬೇಕು.
ಸಸ್ಯಹಾರಿ ಆಹಾರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೇಳೆಕಾಳು, ಧಾನ್ಯಗಳು, ಹಾಲಿನ ಉತ್ಪನ್ನ ಆಹಾರದಲ್ಲಿರಲಿ. ಪ್ರೋಟೀನ್ ಹಾಗೂ ಜೀವಸತ್ವವಿರುವ ಆಹಾರವನ್ನು ಅವಶ್ಯವಾಗಿ ತೆಗೆದುಕೊಳ್ಳಬೇಕು.
ಫಾಸ್ಟ್ ಫುಡ್ ಗಳು ಲೈಂಗಿಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ತಂಪಾದ ಪಾನೀಯಗಳು, ಚಾಕೊಲೇಟ್, ಪಿಜ್ಜಾ, ಬರ್ಗರ್ ಇತ್ಯಾದಿಗಳಿಂದ ದೂರವಿರುವುದು ಒಳ್ಳೆಯದು.
ಡಯೆಟ್ ಹಾಗೂ ಉಪವಾಸದಿಂದಾಗಿ ದೇಹಕ್ಕೆ ಅವಶ್ಯವಾಗಿ ಬೇಕಾಗುವ ಕ್ಯಾಲೋರಿ ಸಿಗುವುದಿಲ್ಲ. ಇದ್ರಿಂದ ದೇಹ ದುರ್ಬಲವಾಗುತ್ತದೆ. ಶಕ್ತಿ ಕಡಿಮೆಯಾಗುತ್ತದೆ. ಲೈಂಗಿಕ ಆಸಕ್ತಿ ಕುಗ್ಗುತ್ತದೆ. ಹಾಗಾಗಿ ಪ್ರತಿದಿನ 2000 ಕ್ಯಾಲೋರಿ ಆಹಾರವನ್ನು ಅವಶ್ಯವಾಗಿ ಸೇವನೆ ಮಾಡಿ.