ಶುಂಠಿ ಒಂದು ಮಾಂತ್ರಿಕ ಮೂಲಿಕೆ. ಇದನ್ನು ಅನಾದಿ ಕಾಲದಿಂದಲೂ ಆಯುರ್ವೇದ ಔಷಧವಾಗಿ ಬಳಸಲಾಗುತ್ತಿದೆ. ಆಹಾರದ ರುಚಿಯನ್ನು ಹೆಚ್ಚಿಸಲು ಕೂಡ ಶುಂಠಿಯನ್ನು ಬಳಸುತ್ತೇವೆ.
ಇದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಶುಂಠಿಯ ಪರಿಣಾಮ ಉಷ್ಣ, ಹಾಗಾಗಿ ಚಳಿಗಾಲದಲ್ಲಿ ಇದರ ಸೇವನೆ ಅತ್ಯಂತ ಸೂಕ್ತ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಶುಂಠಿ, ನೆಗಡಿ, ಕಫ ಮತ್ತು ಕೆಮ್ಮಿಗೆ ಪರಿಣಾಮಕಾರಿ ಮದ್ದು.
ಪುರುಷರು ಶುಂಠಿ ಉಪ್ಪಿನ ಕಾಯಿಯನ್ನು ಸೇವನೆ ಮಾಡಬೇಕು. ಇದರಿಂದ ಪುರುಷರ ದೈಹಿಕ ದೌರ್ಬಲ್ಯವನ್ನು ಹೋಗಲಾಡಿಸಬಹುದು. ಲೈಂಗಿಕತೆಯಲ್ಲಿ ಸಮಸ್ಯೆಗಳಿದ್ದರೆ, ದೌರ್ಬಲ್ಯ ಕಾಡುತ್ತಿದ್ದರೆ ಶುಂಠಿಯಲ್ಲಿ ಅದಕ್ಕೆ ಪರಿಹಾರವಿದೆ. ಶುಂಠಿ ಉಪ್ಪಿನಕಾಯಿಯನ್ನು ತಯಾರಿಸುವುದು ಕೂಡ ಬಹಳ ಸುಲಭ. ಶುಂಠಿ ಉಪ್ಪಿನಕಾಯಿ ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರಿಗೆ ನೋವಿನಿಂದ ಪರಿಹಾರವನ್ನು ನೀಡುತ್ತದೆ. ಶುಂಠಿ ಉಪ್ಪಿನಕಾಯಿ ಮಾಡುವುದು ಹೇಗೆ ಎಂದು ತಿಳಿಯೋಣ.
ಶುಂಠಿ ಉಪ್ಪಿನಕಾಯಿ ತಯಾರಿಸಲು 250 ಗ್ರಾಂ ಶುಂಠಿ, ಅರಿಶಿನ ಪುಡಿ ಕಾಲು ಟೀಸ್ಪೂನ್, ಹುಣಸೆಹಣ್ಣು 100 ಗ್ರಾಂ, ಬೆಲ್ಲ 50 ಗ್ರಾಂ, ಮೆಣಸಿನ ಪುಡಿ, ರುಚಿಗೆ ಉಪ್ಪು, ಮೆಂತ್ಯ 1 ಟೀಸ್ಪೂನ್, ಕರಿಬೇವಿನ ಎಲೆಗಳು 3-4,ಸಾಸಿವೆ 1 ಟೀ ಸ್ಪೂನ್ಎಣ್ಣೆ 1/2 ಕಪ್, 2 ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ, ಲವಂಗ 3-4, ಒಂದು ಚಿಟಿಕೆ ಇಂಗು ತೆಗೆದುಕೊಳ್ಳಿ. ಶುಂಠಿಯನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಿ. ಸಿಪ್ಪೆ ತೆಗೆದು ಉದ್ದದ ತುಂಡುಗಳಾಗಿ ಕತ್ತರಿಸಿ.
ಒಂದು ಪಾತ್ರೆಯಲ್ಲಿ ಸ್ವಲ್ಪ ಬಿಸಿನೀರನ್ನು ಹಾಕಿ ಅದರಲ್ಲಿ ಹುಣಸೆಹಣ್ಣನ್ನು ನೆನೆಸಿಡಿ.ಹುಣಸೆಹಣ್ಣನ್ನು ಹಿಸುಕಿ ರಸ ಬೇರ್ಪಡಿಸಿಕೊಳ್ಳಿ. ಇದಾದ ಬಳಿಕ ಬಾಣಲೆಯಲ್ಲಿ ಮೆಂತ್ಯವನ್ನು ಹುರಿದು ತಣ್ಣಗಾದ ನಂತರ ಮಿಕ್ಸಿಯಲ್ಲಿ ರುಬ್ಬಿ ಪುಡಿ ಮಾಡಿಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಶುಂಠಿ ಚೂರುಗಳನ್ನು ಫ್ರೈ ಮಾಡಿ. ಶುಂಠಿ ತಿಳಿ ಕಂದು ಬಣ್ಣಕ್ಕೆ ಬಂದಾಗ ಕೆಳಕ್ಕಿಳಿಸಿ. ಹುಣಸೆಹಣ್ಣು, ಕೆಂಪು ಮೆಣಸಿನ ಪುಡಿ, ಅರಿಶಿನ, ಉಪ್ಪು ಮತ್ತು ಇಂಗನ್ನು ಬ್ಲೆಂಡರ್‌ಲ್ಲಿ ರುಬ್ಬಿಕೊಳ್ಳಿ.
ನಂತರ ಅದಕ್ಕೆ ಬೆಲ್ಲ ಮತ್ತು ಮೆಂತ್ಯ ಪುಡಿ ಸೇರಿಸಿ ಮತ್ತೊಮ್ಮೆ ಬ್ಲೆಂಡ್ ಮಾಡಿ.ಉಪ್ಪಿನಕಾಯಿಗೆ ಒಗ್ಗರಣೆ ಹಾಕಲು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಕಾದ ಎಣ್ಣೆಯಲ್ಲಿ ಸಾಸಿವೆ ಮತ್ತು ಬೆಳ್ಳುಳ್ಳಿಯನ್ನು ಹುರಿಯಿರಿ. ಕರಿಬೇವಿನ ಎಲೆಗಳು ಮತ್ತು ಕೆಂಪು ಮೆಣಸಿನಕಾಯಿಗಳನ್ನು ಗರಿಗರಿಯಾಗುವವರೆಗೆ ಫ್ರೈ ಮಾಡಿ ಮತ್ತು ಗ್ಯಾಸ್ ಆಫ್ ಮಾಡಿ. ನಂತರ ಒಂದು ಪಾತ್ರೆಯಲ್ಲಿ ಶುಂಠಿ ಚೂರುಗಳು ಮತ್ತು ಕಲಸಿದ ಮಿಶ್ರಣವನ್ನು ಹಾಕಿ. ಒಗ್ಗರಣೆಯನ್ನು ಬೆರೆಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿದರೆ ಉಪ್ಪಿನಕಾಯಿ ಸವಿಯಲು ಸಿದ್ಧ. ವಿಶೇಷವಾಗಿ ಪುರುಷರು ಇದನ್ನು ನಿಯಮಿತವಾಗಿ ಸೇವನೆ ಮಾಡಬಹುದು.