ಪ್ರತಿಯೊಂದು ಕೆಲಸಕ್ಕೂ ಒಂದು ಸಮಯವಿರುತ್ತದೆ. ಹಾಗೆ ಅದ್ರದ್ದೆ ಆದ ಕೆಲವು ಕಟ್ಟುಪಾಡುಗಳಿವೆ. ಊಟವಿರಲಿ ಇಲ್ಲ ಸೆಕ್ಸ್ ಇರಲಿ. ಕೆಲವೊಮ್ಮೆ ಹಾಸಿಗೆಯಲ್ಲಿ ಮಾಡುವ ಒಂದು ಸಣ್ಣ ತಪ್ಪು ಲೈಂಗಿಕ ಜೀವನವನ್ನು ಸಂಪೂರ್ಣ ಹಾಳು ಮಾಡುತ್ತದೆ. ಸಂಗಾತಿ ಹತ್ತಿರ ಬಂದಾಗ ಸಾರಿ ಎಂದು ಕೆಲವರು ದೂರ ಹೋಗ್ತಾರೆ. ಈ ಸಾರಿ, ಸಂಗಾತಿಗೆ ನೋವುಂಟು ಮಾಡುವುದು ಸಹಜ. ಆದ್ರೆ ಈ ಸಾರಿಯೊಂದೇ ಅಲ್ಲ ಇನ್ನೂ ಕೆಲ ತಪ್ಪುಗಳು ಲೈಂಗಿಕ ಜೀವನದಲ್ಲಿ ಬಿರುಕು ಮೂಡಲು ಕಾರಣವಾಗುತ್ತವೆ.
ಮೊಬೈಲ್ ಬಳಕೆ : ಸಂಭೋಗದ ವೇಳೆ ಮೊಬೈಲ್ ದೂರವಿದ್ದರೆ ಒಳ್ಳೆಯದು. ಸೆಕ್ಸ್ ವೇಳೆ ಅಪ್ಪಿತಪ್ಪಿಯೂ ಮೊಬೈಲ್ ಮುಟ್ಟಬೇಡಿ. ರೋಮ್ಯಾಂಟಿಕ್ ಮೂಡ್ ಈ ಮೊಬೈಲ್ ನಿಂದ ತತಕ್ಷಣ ಹಾಳಾಗುತ್ತದೆ.
ಏಕಾಂತ ಜೀವನದ ಅನುಭವಗಳನ್ನು ಎಂದೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಡಿ.
ಒಬ್ಬೊಬ್ಬರ ಆಲೋಚನೆ ಒಂದೊಂದು ರೀತಿಯಿರುತ್ತದೆ. ಹಾಗಾಗಿ ದೌರ್ಜನ್ಯ ಬೇಡ.
ಸಂಗಾತಿ ದೇಹ ಸೌಂದರ್ಯದ ಬಗ್ಗೆ ಎಂದೂ ಅವಹೇಳನ ಬೇಡ. ಸಂಗಾತಿ ಸೌಂದರ್ಯವನ್ನು ಆಡಿಕೊಳ್ಳಬೇಡಿ. ದೌರ್ಬಲ್ಯ ಪ್ರತಿಯೊಬ್ಬರಲ್ಲಿಯೂ ಇರುವಂತಹದ್ದು ನೆನಪಿರಲಿ.
ನಿಮಗಿಷ್ಟವಾಗದ ಅಥವಾ ನಿಮಗೆ ಕಿರಿಕಿರಿ ಎನ್ನಿಸುವ, ನೋವುಂಟು ಮಾಡುವ ವಿಷ್ಯವನ್ನು ಸಂಗಾತಿಯಿಂದ ಮುಚ್ಚಿಡಬೇಡಿ. ನಿಮ್ಮ ಮಾತು ಸಂಗಾತಿಗೆ ಆ ಕ್ಷಣ ನೋವು ನೀಡಬಹುದು. ಆದ್ರೆ ಮುಂದೆ ಸುಧಾರಣೆಗೆ ನೆರವಾಗುತ್ತದೆ.
ಸೆಕ್ಸ್ ವೇಳೆ ಸೆಕ್ಸ್ ಬಗ್ಗೆ ಮಾತನಾಡಿ. ಇದು ಮೂಡ್ ಹಾಳು ಮಾಡುವ ಬದಲು ಉತ್ಸಾಹ ತುಂಬುತ್ತದೆ.
ಸೆಕ್ಸ್ ಬಗ್ಗೆ ಸಂಗಾತಿಗಿಂತ ಮೊದಲೇ ನೀವು ಆಸಕ್ತಿ ತೋರಿದ್ರೆ ಅದ್ರಲ್ಲಿ ತಪ್ಪೇನಿಲ್ಲ. ಈ ಬಗ್ಗೆ ಮುಜುಗರಪಟ್ಟುಕೊಳ್ಳುವ ಅಗತ್ಯವಿಲ್ಲ. ಇದು ಲೈಂಗಿಕ ಜೀವನವನ್ನು ಗಟ್ಟಿಗೊಳಿಸುತ್ತದೆ.