alex Certify ಲೈಂಗಿಕ ಜೀವನ ಹಾಳು ಮಾಡಬಹುದು ಸ್ತನದ ಗಾತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಂಗಿಕ ಜೀವನ ಹಾಳು ಮಾಡಬಹುದು ಸ್ತನದ ಗಾತ್ರ

ಮಹಿಳೆಯರ ಸ್ತನ ಅವ್ರ ಸೌಂದರ್ಯದ ಪ್ರಮುಖ ಭಾಗಗಳಲ್ಲಿ ಒಂದು. ಹುಡುಗಿಯರು ಹಾಗೂ ಮಹಿಳೆಯರು ತಮ್ಮ ಸ್ತನದ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಾರೆ.

ಸುಂದರ ಸ್ತನವನ್ನು ಹೊಂದಿ ಸಂಗಾತಿಯನ್ನು ಆಕರ್ಷಿಸಲು ಎಲ್ಲ ಮಹಿಳೆಯರು ಬಯಸ್ತಾರೆ. ಆದ್ರೆ ಸ್ತನದ ಸೌಂದರ್ಯ ಹಾಳಾಗಿದ್ದರೆ, ಗಾತ್ರ ತುಂಬಾ ದೊಡ್ಡದಾಗಿದ್ದರೆ ಇದು ಮುಜುಗರಕ್ಕೆ ಕಾರಣವಾಗುತ್ತದೆ. ಮಹಿಳೆಯರು ತಮಗಿಷ್ಟವಾಗುವ ಬಟ್ಟೆ ಧರಿಸಲು ಹಿಂದೆ ಮುಂದೆ ನೋಡುತ್ತಾರೆ.

ಸ್ತನದ ಸೌಂದರ್ಯ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಹೆರಿಗೆ ನಂತ್ರ ಮಹಿಳೆಯರು ಸ್ತನದ ಸೌಂದರ್ಯ ಕಳೆದುಕೊಳ್ತಾರೆ. ಇದು ಸಂಗಾತಿಯನ್ನು ಆಕರ್ಷಿಸದಿರಲು ಪ್ರಮುಖ ಕಾರಣವಾಗುವ ಸಾಧ್ಯತೆಯಿರುತ್ತೆ. ಸ್ತನದ ಸೌಂದರ್ಯ ಕಾಪಾಡಿಕೊಳ್ಳಲು ಮಹಿಳೆಯರು ಕೆಲ ಟಿಪ್ಸ್ ಅನುಸರಿಸಬೇಕಾಗುತ್ತದೆ.

ಸ್ತನ ಸುಂದರವಾಗಿ ಕಾಣಲು ನೀವು ಧರಿಸುವ ಬ್ರಾ ಮಹತ್ವದ ಪಾತ್ರ ವಹಿಸುತ್ತದೆ. ನಿಮ್ಮ ಸ್ತನದ ಗಾತ್ರಕ್ಕೆ ಸರಿ ಹೊಂದುವ ಬ್ರಾ ಧರಿಸಬೇಕು. ಸ್ತನದ ಗಾತ್ರಕ್ಕಿಂತ ಒಂದು ಸೈಜ್ ಸಣ್ಣ ಬ್ರಾ ಧರಿಸಿದ್ರೆ ಉತ್ತಮ.

ಗರ್ಭಿಣಿಯರಾದ ಸಮಯದಲ್ಲಿ ವ್ಯಾಯಾಮ ಮಾಡಬೇಕು. ಇದು ಸ್ತನದ ಗಾತ್ರ, ಆರೋಗ್ಯದ ಜೊತೆ ನಿಮ್ಮ ಇಡೀ ದೇಹದ ಆರೋಗ್ಯ ಹಾಗೂ ಹುಟ್ಟುವ ಮಗುವಿನ ಆರೋಗ್ಯಕ್ಕೆ ಒಳ್ಳೆಯದು.

ಪೌಷ್ಟಿಕ ಆಹಾರ ಸೇವನೆ ಮಾಡಿದ್ರೆ ಸ್ತನದ ಸಡಿಲತೆ ಕಡಿಮೆಯಾಗುತ್ತದೆ. ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಅಂಶ ಹೆಚ್ಚಿರುವ ಆಹಾರ ಸ್ತನದ ಸೌಂದರ್ಯಕ್ಕೆ ಒಳ್ಳೆಯದು.

ಸ್ತನಪಾನ ಮಾಡುವ ವೇಳೆ ಸಾಮಾನ್ಯವಾಗಿ ಎಲ್ಲ ತಾಯಂದಿರೂ ದೊಡ್ಡ ತಪ್ಪು ಮಾಡ್ತಾರೆ. ಮಗುವಿನ ಹತ್ತಿರಕ್ಕೆ ಬಗ್ಗಿ ಸ್ತನಪಾನ ಮಾಡಿಸುತ್ತಾರೆ. ಇದು ಸ್ತನದ ಗಾತ್ರ ಬದಲಾವಣೆಗೆ ಕಾರಣವಾಗುತ್ತದೆ. ಸ್ತನಪಾನದ ಬೆಡ್ ಸಹಾಯ ಪಡೆದು ಮಗುವಿಗೆ ಹಾಲುಣಿಸಿದ್ರೆ ಸ್ತನ ಹೆಚ್ಚು ಸಡಿಲವಾಗುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...