ಯೋಗ ದೇಹದ ಪ್ರತಿಯೊಂದು ಭಾಗ ಆರೋಗ್ಯವಾಗಿರಲು ನೆರವಾಗುತ್ತದೆ. ನಿಯಮಿತ ರೂಪದಲ್ಲಿ ಮಾಡುವ ಯೋಗದಿಂದ ಕಠಿಣ ಆರೋಗ್ಯ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಯೋಗದಿಂದ ಶರೀರದ ಜೊತೆ ಮನಸ್ಸು ಶಾಂತವಾಗಿ ಉಲ್ಲಾಸಿತವಾಗಿರುತ್ತದೆ. ಈ ಯೋಗ ಲೈಂಗಿಕ ಜೀವನವನ್ನು ಉತ್ತಮವಾಗಿಡಲು ನೆರವಾಗುತ್ತದೆ.
ಹಲಾಸನ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪುರುಷ ಹಾಗೂ ಮಹಿಳೆ ಇಬ್ಬರ ಲೈಂಗಿಕ ಗ್ರಂಥಿಗಳನ್ನು ಬಲಪಡಿಸಿ, ಸಕ್ರಿಯಗೊಳಿಸುತ್ತದೆ. ನೆಲದ ಮೇಲೆ ನೇರವಾಗಿ, ಅಂಗಾತವಾಗಿ ಮಲಗಬೇಕು. ಉಸಿರನ್ನು ಎಳೆದುಕೊಳ್ಳುತ್ತ ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಎರಡು ಕೈಗಳನ್ನು ಬೆನ್ನಿಗೆ ಆಧಾರವಾಗಿರುವಂತೆ ನೋಡಿಕೊಂಡು ಕಾಲುಗಳನ್ನು ಭೂಮಿಗೆ ತಾಗಿಸಬೇಕು. ನಂತ್ರ ಕೈಗಳನ್ನು ಕಾಲಿನ ವಿರುದ್ಧ ದಿಕ್ಕಿಗೆ ಚಾಚಬೇಕು.
ಉಷ್ಠಾಸನ ಕೂಡ ಲೈಂಗಿಕ ಜೀವನ ಉತ್ತಮಗೊಳಿಸುತ್ತದೆ. ಜನನಾಂಗದ ರಕ್ತ ಪರಿಚಲನೆಯನ್ನು ಇದು ಉತ್ತಮಗೊಳಿಸುತ್ತದೆ. ಮೊದಲು ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಬೇಕು. ನಂತ್ರ ಶರೀರವನ್ನು ಮೇಲೆತ್ತಿ. ಕೈಗಳನ್ನು ಕಾಲಿಗೆ ತಾಗಿಸಿ, ಶರೀರವನ್ನು ನಿಧಾನವಾಗಿ ಹಿಂದಕ್ಕೆ ಚಾಚಲು ಪ್ರಯತ್ನಿಸಿ. ಸರಿಯಾದ ವಿಧಾನದಲ್ಲಿ ಈ ಯೋಗಾಭ್ಯಾಸವನ್ನು ಪ್ರತಿದಿನ ಮಾಡುತ್ತ ಬಂದಲ್ಲಿ ಲೈಂಗಿಕ ಸಮಸ್ಯೆಗಳು ದೂರವಾಗುತ್ತವೆ.