ವಯಸ್ಸು ಹೆಚ್ಚಾಗುವುದರ ಜೊತೆಗೆ ವೇಗದ ಲೈಫ್ ಸ್ಟೈಲ್ ನಿಂದಾಗಿ ಹಾರ್ಮೋನುಗಳಲ್ಲಿ ಏರುಪೇರಾಗುತ್ತದೆ. ಇದರ ಕಾರಣದಿಂದ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಇದನ್ನು ಹೆಚ್ಚಿಸಲು ಯಾವುದೇ ಔಷಧಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಆರಾಮವಾಗಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ.
ಆಚಾನಕ್ ಆಗಿ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಡಿಮೆಯಾದ್ರೆ ತಕ್ಷಣ ಥೆರಪಿ ಮಾಡಿ. ಕೇವಲ ಎರಡು ಆಕ್ಯುಪ್ರೆಶರ್ ಪಾಯಿಂಟ್ ಒತ್ತುವುದರಿಂದ ಕಡಿಮೆಯಾದ ಪ್ರಣಯದ ಬಯಕೆ ಜಾಸ್ತಿಯಾಗುತ್ತಾ ಎಂದು ನಿಮಗೆ ಆಶ್ಚರ್ಯವಾಗಬಹುದು. ಯಸ್ ಈ ಥೆರಪಿಯಿಂದ ಬಯಕೆ ಮತ್ತೆ ಚಿಗುರೊಡೆಯುವುದಲ್ಲದೆ, ಜಾಸ್ತಿಯಾಗುತ್ತದೆ. ನಿಮ್ಮ ಲವ್ ಲೈಫ್ ಮತ್ತಷ್ಟು ರೋಮ್ಯಾಂಟಿಕ್ ಆಗಿರುತ್ತದೆ.
ಮೊದಲ ವಿಧಾನ: ಹೊಟ್ಟೆಯ ನಾಭಿ ಜಾಗದಲ್ಲಿ ನಿಮ್ಮ ಕೈಗಳ ಸಹಾಯದಿಂದ ನಾಲ್ಕೈದು ನಿಮಿಷ ಒತ್ತುತ್ತಿರಿ. ಒತ್ತಡ ಹಾಕುತ್ತಿರುವಾಗ ಎರಡು ಬೆರಳುಗಳು ಹೊಕ್ಕುಳಿನಿಂದ ಸ್ವಲ್ಪ ಕೆಳಗೆ ಹೋಗಲಿ. ಸ್ವಲ್ಪ ಸಮಯದ ನಂತರ ಆ ಸ್ಥಳಕ್ಕೆ ಒತ್ತಡ ಹಾಕಿ. ಬೆಳಿಗ್ಗೆ ಹಾಗೂ ಸಂಜೆ ಹತ್ತು ನಿಮಿಷ ಮಾಡುತ್ತಿರಿ.
ಎರಡನೇ ವಿಧಾನ: ಕಿಡ್ನಿ ಪಾಯಿಂಟ್ ನಲ್ಲಿ ಲೈಂಗಿಕ ಕ್ರಿಯೆಯ ಹಾರ್ಮೋನ್ ಹೆಚ್ಚಾಗುತ್ತಿರುತ್ತದೆ. ಕಿಡ್ನಿ ಪಾಯಿಂಟ್, ಹಿಮ್ಮಡಿ ಬೋನ್ ನಲ್ಲಿರುತ್ತದೆ. ಈ ಪಾಯಿಂಟ್ ನಲ್ಲಿ ಬೆರಳುಗಳಿಂದ ಒತ್ತಡ ಹಾಕಿ.