ಆಘಾತಕಾರಿ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಲೈಂಗಿಕ ಸಂತೋಷಕ್ಕಾಗಿ ತನ್ನ ಶಿಶ್ನದೊಳಗೆ ಆರು ಕಿಡ್ನಿ ಬೀನ್ಸ್ ಅನ್ನು ತೂರಿಸಿಕೊಂಡಿದ್ದಾನೆ. ಆದರೆ, ಅವು ಖಾಸಗಿ ಅಂಗದಲ್ಲಿ ಸಿಲುಕಿದ್ದು, ಹೊರ ತೆಗೆಯುವ ಪ್ರಯತ್ನ ವಿಫಲವಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಮೂತ್ರ ವಿಸರ್ಜಿಸಲು ತೊಂದರೆಯಾಗಿರುವುದಾಗಿ ಆತ ವೈದ್ಯರಿಗೆ ಹೇಳಿದ್ದಾನೆ. ಡೈಲಿ ಮೇಲ್ ಪ್ರಕಟಿಸಿದ ವರದಿಯ ಪ್ರಕಾರ, ಈ ಘಟನೆ ಅಮೆರಿಕದ ಮಿಚಿಗನ್‌ನಲ್ಲಿ ನಡೆದಿದೆ. 30 ವರ್ಷದ ವ್ಯಕ್ತಿ ಈ ರೀತಿ ಯಡವಟ್ಟು ಮಾಡಿಕೊಂಡಿದ್ದಾನೆ. ಅವನಿಗೆ ಮೂತ್ರ ವಿಸರ್ಜಿಸಲು ಸಹ ಸಾಧ್ಯವಾಗಲಿಲ್ಲವಾದ್ದರಿಂದ ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತು. ವೈದ್ಯರು ಆತನಿಗೆ ಶಸ್ತ್ರಚಿಕಿತ್ಸೆ ಮಾಡಿ ಜೀವ ಉಳಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದಾಗ ಯುವಕನನ್ನು ಮಿಚಿಗನ್‌ನ ಸ್ಪ್ಯಾರೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವನಿಗೆ ವಿಪರೀತ ನೋವಾಗಿ ಮೂತ್ರ ವಿಸರ್ಜಿಸಲು ಸಹ ಸಾಧ್ಯವಾಗಲಿಲ್ಲ. ವೈದ್ಯರು ತಪಾಸಣೆ ಮಾಡಿದಾಗ, ಈ ಯುವಕನ ಖಾಸಗಿ ಭಾಗದಲ್ಲಿ 6 ಕಿಡ್ನಿ ಬೀನ್ಸ್ ಅಂಟಿಕೊಂಡಿರುವುದನ್ನು ಗಮನಿಸಿದ್ದಾರೆ. ಮಾತ್ರವಲ್ಲ, ಅದನ್ನು ನೋಡಿ ವೈದ್ಯರು ಬೆಚ್ಚಿಬಿದ್ದಿದ್ದಾರೆ.
ಆದರೆ, ವೈದ್ಯರಿಗೆ ಅದರ ಬಗ್ಗೆ ಯೋಚಿಸಲು ಅಥವಾ ಉತ್ತರಗಳನ್ನು ಕಂಡುಕೊಳ್ಳಲು ಸಮಯವಿರಲಿಲ್ಲ. ಆ ಯುವಕನನ್ನು ಉಳಿಸುವ ಅಗತ್ಯವಿದೆ ಎಂಬುದನ್ನು ಮನಗಂಡು ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಲು ಮತ್ತು ಅಂಟಿಕೊಂಡಿರುವ ಧಾನ್ಯಗಳನ್ನು ತೆಗೆಯಲು ಮುಂದಾಗಿದ್ದಾರೆ. ಬೀನ್ಸ್ ತೆಗೆದುಹಾಕಲು ಶಸ್ತ್ರಚಿಕಿತ್ಸೆ ಮಾಡಿದ ನಂತರ, ರೋಗಿಯು ಸಂಪೂರ್ಣ ಚೇತರಿಸಿಕೊಂಡಿದ್ದು, ಆತನನ್ನು ಬಿಡುಗಡೆ ಮಾಡಲಾಗಿದೆ.
ಈ ಕಾರ್ಯಾಚರಣೆ ಚಿಕ್ಕದಾಗಿದ್ದರೂ, ಅಪಾಯ ದೊಡ್ಡದಾಗಿತ್ತು. ಬೀಜಗಳು ಕೊಳವೆಯಲ್ಲಿ ಸಿಲುಕಿಕೊಂಡಿವೆ ಎಂದು ಡಾ. ಮಾರ್ಗೋ ಡೆನ್ನಿಸ್ ಹೇಳಿದ್ದಾರೆ. ಯುವಕ ತನ್ನ ಮೂತ್ರನಾಳದಿಂದ ಬೀನ್ಸ್ ಚಿಮುಟಗಳನ್ನು ಬಳಸಿ ತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆತ ಯಾಕೆ ಈ ಕೃತ್ಯ ಎಸಗಿದ್ದಾನೆ ಎಂದು ವೈದ್ಯರು ಕೇಳಿದಾಗ, ಪ್ರಯೋಗ ಮಾಡುತ್ತಿರುವುದಾಗಿ ಯುವಕ ಉತ್ತರಿಸಿದ್ದಾನೆ ಎನ್ನಲಾಗಿದೆ.