ಲೈಂಗಿಕ ಇಚ್ಛೆ ಒಂದು ನೈಸರ್ಗಿಕ ಬಯಕೆ. ಪ್ರತಿ ಮಹಿಳೆ ಹಾಗೂ ಪುರುಷನಲ್ಲಿ ಲೈಂಗಿಕ ಆಕರ್ಷಣೆ ಇದ್ದೇ ಇರುತ್ತದೆ. ಆದ್ರೆ ನಮ್ಮ ಜಗತ್ತಿನಲ್ಲಿ ಸೆಕ್ಸ್ ಗೆ ಸಂಬಂಧಿಸಿದಂತೆ ಕೆಲವೊಂದು ಅಂಧ ವಿಶ್ವಾಸವಿದೆ. ಲೈಂಗಿಕತೆಯನ್ನು ಕೆಟ್ಟದೆಂದು ಭಾವಿಸುತ್ತಾರೆ.
ಲೈಂಗಿಕತೆ ಬಗ್ಗೆ ಅರಿವಿರಬೇಕು. ಅದ್ರ ಬಗ್ಗೆ ತಿಳಿದುಕೊಳ್ಳುವುದು ತಪ್ಪಲ್ಲ. ವೈದ್ಯರ ಪ್ರಕಾರ ಪ್ರತಿಯೊಬ್ಬನಿಗೂ ಇದ್ರ ಬಗ್ಗೆ ಜ್ಞಾನವಿರಬೇಕು. ಆದ್ರೆ ಯೋಗ್ಯ ವ್ಯಕ್ತಿಯಿಂದ ಸಂಕೋಚವಿಲ್ಲದೆ ಇದ್ರ ಬಗ್ಗೆ ತಿಳಿದುಕೊಳ್ಳಬೇಕು.
ಸೆಕ್ಸ್ ಒಂದು ನೈಸರ್ಗಿಕ ಕ್ರಿಯೆ. ಇದ್ರಲ್ಲಿ ಸಮಸ್ಯೆ ಕಂಡು ಬಂದಲ್ಲಿ ಅದನ್ನು ಹಣೆ ಬರಹ, ನಂಬಿಕೆ, ಧರ್ಮ, ಅನುಗ್ರಹ, ಸಹಾನುಭೂತಿಗೆ ಹೋಲಿಕೆ ಮಾಡಬೇಡಿ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ನೀವು ಇದನ್ನು ಧರ್ಮ-ಸಂಸ್ಕೃತಿಗೆ ಹೋಲಿಸಿ ಸಮಸ್ಯೆ ಮುಚ್ಚಿಡುತ್ತ ಬಂದಲ್ಲಿ ಲೈಂಗಿಕತೆ ಅಸಹ್ಯ ಎನ್ನಿಸಲು ಶುರುವಾಗುತ್ತದೆ.
ಸೆಕ್ಸ್ ಬೇರ್ಪಡಿಸುವುದಿಲ್ಲ : ಸೆಕ್ಸ್ ಮಹಿಳೆ-ಪುರುಷರನ್ನು ಮನಸ್ಸು-ದೇಹದ ಮೂಲಕ ಒಂದುಗೂಡಿಸುತ್ತದೆ. ಲೈಂಗಿಕತೆಯನ್ನು ಕೆಟ್ಟದ್ದು ಎಂದುಕೊಳ್ಳಬೇಡಿ. ಹೀಗೆ ಅಂದುಕೊಂಡಲ್ಲಿ ಅದು ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತದೆ. ಇದ್ರಿಂದ ಎಂದೂ ಹೊರ ಬರಲು ಸಾಧ್ಯವಾಗುವುದಿಲ್ಲ.
ಸೆಕ್ಸ್ ಒಂದು ಭಾವನೆ : ಲೈಂಗಿಕ ಇಚ್ಛೆ ಮಹಿಳೆ ಹಾಗೂ ಪುರುಷನಲ್ಲಿ ಸಮಾನವಾಗಿರುತ್ತದೆ. ಇದ್ರಲ್ಲಿ ಯಾರೂ ಹೆಚ್ಚಿಲ್ಲ. ಯಾರೂ ಕಡಿಮೆಯಿಲ್ಲ. ವ್ಯಕ್ತಿ ಎಲ್ಲ ಸಮಯದಲ್ಲೂ ಉತ್ತೇಜಿತನಾಗಿರುವುದಿಲ್ಲ. ಕೆಲವೊಂದು ಸಮಯದಲ್ಲಿ ಮಾತ್ರ ಉತ್ತೇಜಿತಗೊಳ್ತಾನೆ. ಇದು ಪ್ರತಿಯೊಬ್ಬರಲ್ಲೂ ಬೇರೆ ಬೇರೆಯಾಗಿರುತ್ತದೆ.