ಲೈಂಗಿಕತೆಯು ದೈಹಿಕ ಮತ್ತು ಮಾನಸಿಕ ಪ್ರಯೋಜನವನ್ನು ನೀಡುತ್ತದೆ. ಹಾಗಾಗಿ ಲೈಂಗಿಕತೆಯ ಬಳಿಕ ಕೆಲವು ಕೆಲಸಗಳನ್ನು ಮಾಡುವುದು ಸಂಪೂರ್ಣ ತಪ್ಪಾಗುತ್ತದೆ. ಇದು ಆರೋಗ್ಯಕರ ಜೀವನಕ್ಕೆ ಬಹಳಷ್ಟು ಹಾನಿಯನ್ನುಂಟು ಮಾಡುತ್ತದೆ. ಸೋಂಕುಗಳಿಗೆ ಕಾರಣವಾಗಬಹುದು. ಹಾಗಾಗಿ ಲೈಂಗಿಕತೆಯ ಬಳಿಕ ಈ ತಪ್ಪುಗಳನ್ನು ಮಾಡಬೇಡಿ.
ದೈಹಿಕ ಸಂಬಂಧದ ಬಳಿಕ ಮೂತ್ರವಿಸರ್ಜನೆ ಮಾಡದಿರುವುದು ತಪ್ಪಾಗುತ್ತದೆ. ಹಾಗಾಗಿ ಲೈಂಗಿಕತೆಯ ಬಳಿಕ ಪ್ರತಿಯೊಬ್ಬರು ಗಂಟೆಯೊಳಗೆ ಮೂತ್ರ ವಿಸರ್ಜನೆ ಮಾಡಬೇಕು. ಇಲ್ಲವಾದರೆ ಬ್ಯಾಕ್ಟೀರಿಯಾಗಳು ಜನನಾಂಗವನ್ನು ಪ್ರವೇಶಿಸಿ ಸೋಂಕಿಗೆ ಕಾರಣವಾಗಬಹುದು.
ಲೈಂಗಿಕತೆಯ ಬಳಿಕ ದೇಹದ ಉಷ್ಣತೆ ಹೆಚ್ಚಳವಾಗುತ್ತದೆ. ಇದರಿಂದ ಬೆವರು ಕೂಡ ಬರುತ್ತದೆ. ಹಾಗಾಗಿ ಸಂಭೋಗದ ಬಳಿಕ ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ. ಇದರಿಂದ ಚರ್ಮ ಉಸಿರಾಡಲು ಕಷ್ಟವಾಗುತ್ತದೆ, ದದ್ದುಗಳು, ಸೋಂಕುಗಳು ಉಂಟಾಗುತ್ತದೆ.
ಲೈಂಗಿಕತೆಯ ಮೊದಲು ಹಾಗೂ ಬಳಿಕ ಕೈಗಳನ್ನು ಸ್ವಚ್ಛಗೊಳಿಸಿ. ಇಲ್ಲವಾದರೆ ಅದರಲ್ಲಿರುವ ಬ್ಯಾಕ್ಟೀರಿಯಾಗಳು ಬಾಯಿ, ಮೂಗಿಗೆ ಪ್ರವೇಶಿಸಿ ಅನಾರೋಗ್ಯಕ್ಕೊಳಗಾಗಬಹುದು.
ಲೈಂಗಿಕತೆಯ ಬಳಿಕ ಕೆಲವು ಮಹಿಳೆಯರು ಜನನಾಂಗವನ್ನು ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸಿ ಸ್ವಚ್ಛಗೊಳಿಸುತ್ತಾರೆ. ಇದು ಖಾಸಗಿ ಅಂಗದ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಗಾಗಿ ಲೈಂಗಿಕತೆಯ ಬಳಿಕ ಬೆಚ್ಚಗಿರುವ ನೀರಿನಿಂದ ಮಾತ್ರ ಸ್ವಚ್ಛಗೊಳಿಸಿ.