ಕೆಲಸ ಹಾಗೂ ಒತ್ತಡ ಸಂಗಾತಿಯಿಂದ ದೂರ ಉಳಿಯುವಂತೆ ಮಾಡುತ್ತಿದೆ. ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಅಂತವರು ಮತ್ತೆ ಲೈಂಗಿಕ ಜೀವನದ ಟ್ರ್ಯಾಕ್ ಗೆ ಮರಳಿ ಬರಬೇಕೆಂದರೆ ಈ ಅಂಶಗಳನ್ನು ನೆನಪಿಡಿ.
ನಿಮ್ಮಿಂದ ಒತ್ತಡವನ್ನು ದೂರ ಇಡಿ : ಒತ್ತಡ ಮತ್ತು ಆಯಾಸವನ್ನು ನಿರ್ಲಕ್ಷಿಸಿ, ಅದನ್ನು ನಿಮ್ಮಿಂದ ದೂರ ಇಡಿ. ಒತ್ತಡವನ್ನು ತೊಡೆದು ಹಾಕುವ ಮಾರ್ಗಗಳನ್ನು ಅನುಸರಿಸಿ. ನಿಮಗೆ ಇಷ್ಟವಾಗುವ ಚಿತ್ರ ನೋಡಿ. ಇಲ್ಲವೇ ವ್ಯಾಯಾಮ, ಧ್ಯಾನದ ಮೂಲಕ ನೀವು ವಿಶ್ರಾಂತಿ ಪಡೆಯಿರಿ.
ಸಂಗಾತಿಯನ್ನು ತಬ್ಬಿಕೊಳ್ಳಿ : ಇದಕ್ಕೂ ಒಂದು ಕಾರಣ ಇದೆ. ನೀವು ಸಂಗಾತಿಯನ್ನು ತಬ್ಬಿಕೊಳ್ಳುವುದರಿಂದ ಚರ್ಮ ಚರ್ಮ ತಾಗುವುದರಿಂದ ಆಕ್ಸಿಟೋಸಿನ್ ಮಟ್ಟ ಹೆಚ್ಚಾಗುತ್ತದೆ. ಇದು ದೇಹಕ್ಕೆ ಆರಾಮ ನೀಡುವುದಲ್ಲದೇ, ಸಂಗಾತಿಯನ್ನು ಹತ್ತಿರ ಮಾಡುತ್ತದೆ.
ರೋಮ್ಯಾಂಟಿಕ್ ಆಗಿ ಮಾತನಾಡಿ : ನಿಮ್ಮ ಸಂಗಾತಿ ಜೊತೆ ರೋಮ್ಯಾಂಟಿಕ್ ಆಗಿ ಮಾತನಾಡಿ. ನಿಮ್ಮ ಮೊದಲ ಭೇಟಿ, ಮೊದಲ ಸಂಭೋಗದ ಬಗ್ಗೆ ನೆನಪು ಮಾಡುವಂತಹ ಮಾತನಾಡಿ.
ಹೊಟ್ಟೆ ತುಂಬ ಊಟ ಬೇಡ : ರಾತ್ರಿ ಹೊಟ್ಟೆ ತುಂಬ ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗೇ ನೀವು ಲೈಂಗಿಕ ಕ್ರಿಯೆ ಮಾಡಬಯಸಿದಲ್ಲಿ ಕಡಿಮೆ ಊಟ ಮಾಡುವುದು ಯೋಗ್ಯ. ಒಂದು ತಾಸಿಗೂ ಮುನ್ನವೇ ಊಟ ಮಾಡಿದರೆ, ನಿಮ್ಮಲ್ಲಿರುವ ಆಲಸ್ಯ ಹೋಗುತ್ತದೆ.
ಕಚಗುಳಿ ಆಟ ಆಡಿ : ಚಿಕ್ಕವರಿರುವಾಗ ಆಡುತ್ತಿದ್ದ ಕಚಗುಳಿ ಆಟ ಆಡಿ.
ಕೊಠಡಿ ಸ್ವಚ್ಛಗೊಳಿಸಿ : ನೀವು ಮಲಗುವ ಕೊಠಡಿಯ ಇಂಟೀರಿಯರ್ ಬದಲಾಯಿಸಿ. ಬೆಳಕನ್ನು ಮಂದಗೊಳಿಸಿ. ಸಣ್ಣಗೆ ಸಂಗೀತ ಕೇಳುತ್ತಿರಲಿ. ಆಯಾಸವಾಗಿದ್ದರೆ ಸಂಗಾತಿಗೆ ಮಸಾಜ್ ಮಾಡಿ.
ಒಟ್ಟಿಗೆ ಸ್ನಾನ ಮಾಡಿ : ಇದು ಕೂಡ ಸೆಕ್ಸ್ ಜೀವನದಲ್ಲಿ ಬದಲಾವಣೆ ತರಬಹುದು. ಸ್ನಾನ ಗೃಹದಲ್ಲಿ ಸುಗಂಧದ ಪರಿಮಳ ಹರಡಿರಲಿ. ಇಬ್ಬರೂ ಬಾತ್ ಟಬ್ ನಲ್ಲಿ ಒಟ್ಟಿಗೆ ಸ್ನಾನ ಮಾಡಿ.
ಸ್ನೇಹಿತರನ್ನು ಭೇಟಿ ಮಾಡಿ : ಹೌದು, ಸ್ನೇಹಿತರನ್ನು ಭೇಟಿ ಮಾಡುವುದರಿಂದ ನೀವು ಮತ್ತೆ ಯುವಕರಾಗುತ್ತೀರಿ. ಹಿಂದಿನ ಜೀವನ ಮತ್ತೆ ಮರಳಿ ಬಂದ ಅನುಭವವಾಗುತ್ತದೆ.