
ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಪುತ್ರ ಶೋಕದಲ್ಲಿದ್ದಾರೆ. ಅವರ ನವಜಾತ ಗಂಡು ಮಗು ಮೃತಪಟ್ಟಿದೆ. ಕ್ರಿಸ್ಟಿಯಾನೋ ಮತ್ತವರ ಗೆಳತಿ ಜಾರ್ಜಿನಾ ರೋಡ್ರಿಗಸ್ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದರು. ಆದ್ರೆ ಈ ಪೈಕಿ ಗಂಡು ಮಗು ಸಾವನ್ನಪ್ಪಿದೆ, ಇನ್ನೊಂದು ಮಗು ಹೆಣ್ಣಾಗಿದ್ದು ಆರೋಗ್ಯವಾಗಿದೆ.
ತಾವು ಮಗು ಕಳೆದುಕೊಂಡಿರೋ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರೋ ರೋನಾಲ್ಡೋ ಅತೀವ ದುಃಖ ವ್ಯಕ್ತಪಡಿಸಿದ್ದಾರೆ. ಇದು ಅತ್ಯಂತ ಕಷ್ಟದ ಸಮಯ ಎಂದಿರೋ ಅವರು, ಗೌಪ್ಯತೆ ಕಾಪಾಡುವಂತೆ ವಿನಂತಿ ಮಾಡಿಕೊಂಡಿದ್ದಾರೆ.
ಮ್ಯಾಂಚೆಸ್ಟರ್ ಯುನೈಟೆಡ್‌ನ ಮುಂದಿನ ಪಂದ್ಯವು ಲಿವರ್‌ಪೂಲ್ ವಿರುದ್ಧ ನಿಗದಿಯಾಗಿದೆ. ಆದ್ರೆ ಮಗುವಿನ ಸಾವಿನ ಆಘಾತದಲ್ಲಿರೋ ರೊನಾಲ್ಡೋ ಈ ಪಂದ್ಯವನ್ನು ಆಡುವುದಿಲ್ಲ. ಕುಟುಂಬವೇ ಎಲ್ಲಕ್ಕಿಂತ ಮುಖ್ಯ, ರೊನಾಲ್ಡೊ ಈ ಕಠಿಣ ಸಮಯದಲ್ಲಿ ತಮ್ಮ ಪ್ರೀತಿಪಾತ್ರರ ಜೊತೆಗಿರಬೇಕು. ಹಾಗಾಗಿ ಅವರು ಲಿವರ್ ಪೂಲ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಮ್ಯಾಂಚೆಸ್ಟರ್ ಯುನೈಟೆಡ್ ಹೇಳಿದೆ. ಈವರೆಗೆ ರೊನಾಲ್ಡೋ ಪ್ರೀಮಿಯರ್ ಲೀಗ್‌ನಲ್ಲಿ 15 ಗೋಲುಗಳನ್ನು ಗಳಿಸಿದ್ದಾರೆ.