ಕ್ಯಾನ್ಸರ್ ಬಹಳ ಅಪಾಯಕಾರಿ ರೋಗ. ಕೆಲವೊಂದು ಸಂದರ್ಭಗಳಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆಯೇ ಲಭ್ಯವಾಗುವುದಿಲ್ಲ. ಆದರೆ ಸರಿಯಾದ ಸಮಯಕ್ಕೆ ಕ್ಯಾನ್ಸರ್ ಪತ್ತೆಯಾದರೆ ಅದನ್ನು ಗುಣಪಡಿಸಬಹುದು. ಇತ್ತೀಚಿನ WHO ವರದಿಯು ಕ್ಯಾನ್ಸರ್ ಬಗ್ಗೆ ಭಯಾನಕ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ ಪ್ರತಿ ವರ್ಷ ಸುಮಾರು 7.8 ಕೋಟಿ ಜನರು ಕ್ಯಾನ್ಸರ್‌ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕ್ಯಾನ್ಸರ್‌ನಲ್ಲಿ ಹಲವಾರು ವಿಧಗಳಿವೆ. ಚಿಕಿತ್ಸೆಗಳೂ ವಿಭಿನ್ನವಾಗಿವೆ. ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ ವಿಜ್ಞಾನಿಗಳು ಉತ್ತಮ ಯಶಸ್ಸನ್ನು ಸಾಧಿಸಿದ್ದಾರೆ. ಇದೀಗ ಪಾರಿಜಾತದ ಎಲೆಗಳಲ್ಲಿ ಲಿವರ್ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುವ ಕೆಲವು ಗುಣಲಕ್ಷಣಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.
ಕ್ಯಾನ್ಸರ್‌ಗೆ ಮದ್ದು ಪಾರಿಜಾತದ ಎಲೆಯ ಕಷಾಯ..!
ಸಂಶೋಧಕರು ಪ್ರಯೋಗಾಲಯದಲ್ಲಿ 5 ವಂಶವಾಹಿಗಳನ್ನು ಸಂಶೋಧಿಸಿದ್ದು, ಕ್ಯಾನ್ಸರ್ ಬೆಳವಣಿಗೆಗೆ ಇದೇ ಕಾರಣ ಎಂದು ಹೇಳಿದ್ದಾರೆ. ರಾತ್ರಿರಾಣಿ ಅಥವಾ ಪಾರಿಜಾತದ ಎಲೆಗಳ ಕಷಾಯವನ್ನು ಬಳಸಿ ಕ್ಯಾನ್ಸರ್ ಬೆಳವಣಿಗೆಯನ್ನು ನಿಲ್ಲಿಸಬಹುದು. ಪಾರಿಜಾತದ ಎಲೆಗಳ ಕಷಾಯವನ್ನು ಬಳಸುವುದರಿಂದ 5 ವಂಶವಾಹಿಗಳು ನಿಷ್ಕ್ರಿಯವಾಗುತ್ತವೆ. ಪಾರಿಜಾತದ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಸಯಾಟಿಕಾ ಸಮಸ್ಯೆ ನಿವಾರಣೆಯಾಗುತ್ತದೆ. ಇದರ ಎಲೆ, ಹೂವು, ತೊಗಟೆಯನ್ನು 200 ಮಿಲಿ ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿದರೆ ಸಂಧಿವಾತ ಸಮಸ್ಯೆ ದೂರವಾಗುತ್ತದೆ. ನೆನಪಿಡಿ ಒಂದು ಲೋಟ ನೀರು ಹಾಕಿದರೆ ಅದು ಕಾಲು ಲೋಟಕ್ಕೆ ಬರುವವರೆಗೆ ಕುದಿಸಬೇಕು.
ಪಾರಿಜಾತದ ಎಲೆಗಳ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದರಿಂದ ನೆಗಡಿ, ಕೆಮ್ಮು ನಿವಾರಣೆಯಾಗುತ್ತದೆ. ಇದರ ಎಲೆಗಳ ರಸವು ಜ್ವರದ ವಿರುದ್ಧ ಕೂಡ ಪರಿಣಾಮಕಾರಿಯಾಗಿದೆ. ಒಬ್ಬ ವ್ಯಕ್ತಿಯು ಜೀವನದಲ್ಲಿ ಯಾವುದೇ ರೀತಿಯ ಒತ್ತಡವನ್ನು ಅನುಭವಿಸುತ್ತಿದ್ದರೆ, ಪಾರಿಜಾತದ ಎಲೆಗಳ ಕಷಾಯ ಕುಡಿಯಬೇಕು. ಈ ಎಲೆಗಳು ಒತ್ತಡ ಮತ್ತು ಆತಂಕವನ್ನು ತೊಡೆದು ಹಾಕಲು ಸಹಾಯ ಮಾಡುತ್ತವೆ.