ಜಿಹಾದಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂ ಯುವತಿಯರು ಹೊರಗಡೆ ಹೋಗುವಾಗ ತಮ್ಮ ಪರ್ಸ್ ನಲ್ಲಿ ಲಿಪ್ ಸ್ಟಿಕ್ ಹಾಗೂ ಬಾಚಣಿಕೆ ಬದಲು ಚಾಕು ಇರಿಸಿಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಕರೆ ನೀಡಿದ್ದಾರೆ.
ಭೂಪಾಲ್ ನಲ್ಲಿ ಮಾತನಾಡಿದ ಅವರು, ಈ ರೀತಿ ಚಾಕುವನ್ನು ಸದಾ ಕಾಲ ಇಟ್ಟುಕೊಳ್ಳುವುದರಿಂದ ಜಿಹಾದಿಗಳನ್ನು ದೂರವಿರಿಸಬಹುದಾಗಿದೆ ಎಂದು ಹೇಳಿದರಲ್ಲದೆ, ಮುಸ್ಲಿಂ ಹೆಣ್ಣು ಮಕ್ಕಳಂತೆ ಹಿಂದೂ ಹೆಣ್ಣುಮಕ್ಕಳು ಕೂಡ ತಮ್ಮ ಸಂಪ್ರದಾಯಗಳನ್ನು ಬಿಡಬಾರದು ಎಂದು ಸಲಹೆ ನೀಡಿದರು.
ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಶ್ರದ್ಧಾ ವಾಲ್ಕರ್ ಪ್ರಕರಣವನ್ನು ಉಲ್ಲೇಖಿಸಿದ ಸಾಧ್ವಿ ಪ್ರಾಚಿ, ಪ್ರೀತಿಯ ಹೆಸರಿನಲ್ಲಿ ನಮ್ಮ ಹೆಣ್ಣುಮಕ್ಕಳ ಜೀವನದ ಜೊತೆ ಜಿಹಾದಿಗಳು ಆಟವಾಡುತ್ತಿದ್ದಾರೆ. ಹೀಗಾಗಿ ತಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂ ಯುವತಿಯರು ಚಾಕು ಇರಿಸಿಕೊಳ್ಳಬೇಕು ಎಂದು ಹೇಳಿದರು.