alex Certify ‘ಲಾಲ್ ಸಿಂಗ್ ಚಡ್ಡಾ’ ನೀರಸ ಪ್ರದರ್ಶನದ ಬೆನ್ನಲ್ಲೇ ಈ ಮನವಿ ಮಾಡಿದ ಕರೀನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಲಾಲ್ ಸಿಂಗ್ ಚಡ್ಡಾ’ ನೀರಸ ಪ್ರದರ್ಶನದ ಬೆನ್ನಲ್ಲೇ ಈ ಮನವಿ ಮಾಡಿದ ಕರೀನಾ

ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ನೀರಸ ಪ್ರದರ್ಶನ ಕಾಣುತ್ತಿದೆ. ಅಮೀರ್ ಖಾನ್ ರ ಈ ಚಿತ್ರಕ್ಕೆ ಹಿಂದೂ ಪರ ಸಂಘಟನೆಗಳು ಬಹಿಷ್ಕಾರಕ್ಕೆ ಕರೆ ನೀಡಿದ್ದು, ಅದು ಚಿತ್ರದ ಕಲೆಕ್ಷನ್ ಮೇಲೆ ಪರಿಣಾಮ ಬೀರಿದೆ.

ಲಾಲ್ ಸಿಂಗ್ ಚಡ್ಡಾ ಬಿಡುಗಡೆಗೂ ಮುನ್ನವೇ ಹಿಂದೂ ಪರ ಸಂಘಟನೆಗಳು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬಹಿಷ್ಕಾರ ಅಭಿಯಾನ ನಡೆಸಿದ್ದು, ಈ ಸಂದರ್ಭದಲ್ಲಿ ಅಮೀರ್ ಖಾನ್, ತಾನು ಭಾರತ ವಿರೋಧಿ ಹೇಳಿಕೆ ನೀಡಿಲ್ಲ. ದಯವಿಟ್ಟು ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಬಹಿಷ್ಕರಿಸಬೇಡಿ ಎಂದು ಮನವಿ ಮಾಡಿದ್ದರು.

ಆದರೆ ಈ ಮನವಿ ಅಷ್ಟೇನೂ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ. ಹೀಗಾಗಿ ‘ಲಾಲ್ ಸಿಂಗ್ ಚಡ್ಡಾ’ ದ ನಾಯಕಿ ಕರೀನಾ ಕಪೂರ್ ಈಗ ಅಖಾಡಕ್ಕೆ ಇಳಿದಿದ್ದಾರೆ. ಪ್ರೇಕ್ಷಕರಲ್ಲಿ ಮನವಿ ಮಾಡಿರುವ ಅವರು, ಈ ಚಿತ್ರಕ್ಕಾಗಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದೇವೆ. ನೂರಾರು ಮಂದಿಯ ಪರಿಶ್ರಮ ಈ ಚಿತ್ರದ ಹಿಂದಿದೆ. ಹಾಗಾಗಿ ದಯವಿಟ್ಟು ಬಾಯ್ಕಾಟ್ ಮಾಡಬೇಡಿ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...