alex Certify ಲಾಲೂ ಆರೋಗ್ಯದಲ್ಲಿ ಏರುಪೇರು: ಏಮ್ಸ್ ಗೆ ಶಿಫ್ಟ್ ಮಾಡಲು ಶಿಫಾರಸು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಲೂ ಆರೋಗ್ಯದಲ್ಲಿ ಏರುಪೇರು: ಏಮ್ಸ್ ಗೆ ಶಿಫ್ಟ್ ಮಾಡಲು ಶಿಫಾರಸು

ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಷ್ಟ್ರೀಯ ಜನತಾದಳ ಮುಖ್ಯಸ್ಥ ಲಾಲು ಪ್ರಸಾದ್​ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಹೀಗಾಗಿ ಅವರನ್ನು ಏಮ್ಸ್​ಗೆ ಸ್ಥಳಾಂತರಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ರಾಜೇಂದ್ರ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ ವೈದ್ಯಕೀಯ ಮಂಡಳಿಯು ಲಾಲು ಯಾದವ್​​ರನ್ನು ಏಮ್ಸ್​​ಗೆ ದಾಖಲಿಸುವಂತೆ ಸಲಹೆ ನೀಡಿದೆ. ಅದರಂತೆ ಇಂದೇ ಲಾಲು ಪ್ರಸಾದ್​ ಯಾದವ್ ​​ರನ್ನು ಏಮ್ಸ್​ಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.

ಲಾಲು ಪ್ರಸಾದ್​ ಯಾದವ್​​ರಿಗೆ ಚಿಕಿತ್ಸೆ ನೀಡಲು ರಿಮ್ಸ್​ ರಚಿಸಿರುವ ಏಳು ಸದಸ್ಯರ ವೈದ್ಯರ ತಂಡದ ಮುಖ್ಯಸ್ಥ ಡಾ.ವಿದ್ಯಾಪತಿ , ಪ್ರಸಾದ್​ ​ರ ಆರೋಗ್ಯ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಏಮ್ಸ್​ಗೆ ಶಿಫ್ಟ್​​ ಮಾಡುವಂತೆ ವೈದ್ಯಕೀಯ ಮಂಡಳಿಯು ಶಿಫಾರಸು ಮಾಡಿದ್ದೇವೆ. ಈ ಶಿಫಾರಸಿನ ಪ್ರತಿಯನ್ನು ನಾವು ಜೈಲಿನ ಸೂಪರಿಂಟೆಂಡೆಂಟ್​​ಗೆ ರವಾನಿಸಿದ್ದೇವೆ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...