ಲಾಟರಿ ಟಿಕೆಟ್ ಖರೀದಿಸಿದ್ದವನೊಬ್ಬನಿಗೆ ಲಾಟರಿ ಸಂಸ್ಥೆಯಿಂದ ನಿಮಗೆ ಬಹುಮಾನ ಬಂದಿದೆ ಎಂದಷ್ಟೇ ಸಂದೇಶ ಬಂದಿದೆ. ಹೀಗಾಗಿ ನನಗೆ ಕಡಿಮೆ ಹಣ ಬಂದಿರಬಹುದೆಂದು ಭಾವಿಸಿ ಲಾಟರಿ ಕಛೇರಿಗೆ ತೆರಳಿದ್ದವನಿಗೆ ಬಂಪರ್ ಬಹುಮಾನ ತನಗೇ ಬಂದಿದೆ ಎಂಬ ವಿಚಾರ ತಿಳಿದಾಗ ತನ್ನ ಕಣ್ಣನ್ನು ತಾನೇ ನಂಬಲಾಗಿಲ್ಲ.
ಇಂತದೊಂದು ಘಟನೆ ಅಮೆರಿಕಾದ ನಾರ್ತ್ ಕೆರೊಲಿನಾದಲ್ಲಿ ನಡೆದಿದ್ದು, ಜೋಶುವಾ ಲಾಕ್ಲಿಯರ್ ಎಂಬಾತ ಲಾಟರಿ ಖರೀದಿಸುವ ಹವ್ಯಾಸ ಹೊಂದಿದ್ದ. ಅದರಂತೆ ಇತ್ತೀಚೆಗೆ ಆತ ಖರೀದಿಸಿದ ಟಿಕೆಟ್ ಗೆ ಬಹುಮಾನ ಬಂದಿದೆ ಎಂಬ ಸಂದೇಶ ಬಂದಿದೆ. ಆಗ ಆತ ತನಗೆ 600 ಡಾಲರ್ (46 ಸಾವಿರ ರೂಪಾಯಿ) ಬಂದಿರಬಹುದೆಂದು ಭಾವಿಸಿ ಅದನ್ನು ಪಡೆಯಲು ಲಾಟರಿ ಕಛೇರಿಗೆ ತೆರಳಿದ್ದಾನೆ.
ಈತನ ಟಿಕೆಟ್ ನಂಬರ್ ಪರಿಶೀಲಿಸಿದ ಅವರು 5,85,949 ಡಾಲರ್ (4.5 ಕೋಟಿ ರೂಪಾಯಿ) ಬಂದಿದೆ ಎಂದು ತಿಳಿಸಿದಾಗ ಜೋಶುವಾಗೆ ನಂಬಿಕೆಯೇ ಬಂದಿರಲಿಲ್ಲ. ಇದೀಗ ಆ ಹಣದಲ್ಲಿ ಹೊಸ ಕಾರು, ಮನೆ ಖರೀದಿಸಲು ಜೋಶುವಾ ಮುಂದಾಗಿದ್ದಾನೆ.