ರವಾ-1/2 ಕಪ್, ತುಪ್ಪ-3 ಟೇಬಲ್ ಸ್ಪೂನ್, ತೆಂಗಿನತುರಿ-3 ಟೇಬಲ್ ಸ್ಪೂನ್, ಸಕ್ಕರೆ-1 ಕಪ್, ನೀರು-1/2 ಕಪ್.
ಮಾಡುವ ವಿಧಾನ:
ಒಂದು ಪ್ಯಾನ್ ಗೆ 1 ಟೇಬಲ್ ಸ್ಪೂನ್ ತುಪ್ಪ ಹಾಕಿ ರವೆಯನ್ನು ಮೂರು ನಿಮಿಷಗಳ ಕಾಲ ಹುರಿದುಕೊಳ್ಳಿ. ನಂತರ ತೆಂಗಿನ ತುರಿ ಸೇರಿಸಿ 1 ನಿಮಿಷಗಳ ಕಾಲ ಹುರಿದುಕೊಳ್ಳಿ. ನಂತರ ಇದನ್ನು ಒಂದು ಬೌಲ್ ಗೆ ತೆಗೆದುಕೊಳ್ಳಿ.
ಒಂದು ಪಾತ್ರೆಗೆ ಸಕ್ಕರೆ ಹಾಗೂ ನೀರು ಸೇರಿಸಿ ಇದು ಒಂದು ಎಳೆ ಪಾಕ ಬರುವವರೆಗೆ ಚೆನ್ನಾಗಿ ಕುದಿಸಿಕೊಳ್ಳಿ. ಇದಕ್ಕೆ ಹುರಿದಿಟ್ಟುಕೊಂಡ ರವೆಯನ್ನು ಸೇರಿಸಿ ನಂತರ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಈ ಮಿಶ್ರಣವನ್ನು ಒಂದು ತುಪ್ಪ ಸವರಿದ ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಅದನ್ನು ಕತ್ತರಿಸಿ ಸರ್ವ್ ಮಾಡಿ.