ಚಾಮರಾಜನಗರ: ಲಸಿಕೆ ಪಡೆಯದಿದ್ದವರಿಗೆ ನೋ ರೇಷನ್, ನೋ ಪೆನ್ಶನ್ ಆದೇಶ ಹೊರಡಿಸಿದ್ದ ಚಾಮರಾಜನಗರ ಡಿಸಿ ಎಂ.ಆರ್. ರವಿ, ವಿವಾದ ಭುಗಿಲೇಳುತ್ತಿದ್ದಂತೆ ತಾನು ಆ ರೀತಿ ಆದೇಶ ಹೊರಡಿಸಿಯೇ ಇಲ್ಲ ಎಂದು ಇದೀಗ ಉಲ್ಟಾ ಹೊಡೆದಿದ್ದಾರೆ.
ಜಿಲ್ಲಾಧಿಕಾರಿಯ ವಿವಾದಾತ್ಮಕ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಎಚ್ಚೆತ್ತ ಡಿಸಿ ಎಂ.ಆರ್.ರವಿ, ಈ ಬಗ್ಗೆ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ ಎಂದು ಹೇಳಿದ್ದಾರೆ. ಪಡಿತರದಾರರಿಗೆ, ಪಿಂಚಣಿದಾರರಿಗೆ ಸೌಲಭ್ಯ ನಿರಾಕರಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿ ಡಿಸಿ ಪ್ರಕಟಣೆ ಹೊರಡಿಸಿದ್ದಾರೆ.
ವಡಾ – ಪಾವ್ಗೆ 22 ಕ್ಯಾರೆಟ್ ಚಿನ್ನದಲಂಕಾರ ಮಾಡಿದ ರೆಸ್ಟೋರೆಂಟ್
ಈ ಮೊದಲು ಚಾಮರಾಜನಗರ ಡಿಸಿ ವಿರುದ್ಧ ಕಿಡಿಕಾರಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಜಿಲ್ಲಾಧಿಕಾರಿ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆಹಾರ ಮತ್ತು ಪಿಂಚಣಿ ನೀಡುವುದಿಲ್ಲ ಎಂದು ಹೆದರಿಸುವುದು ಅಕ್ರಮ, ಅನೈತಿಕ ಹಾಗೂ ಅಸಾಂವಿಧಾನಿಕ ಎಂದು ಅವರು ಚಾಮರಾಜನಗರ ಜಿಲ್ಲಾಡಳಿತದ ಕ್ರಮದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದರು.
ಇನ್ನು ಈ ಬಗ್ಗೆ ಸ್ಪಷ್ಟಪಡಿಸಿದ ಸಚಿವ ಕೆ.ಈಶ್ವರಪ್ಪ, ಸರ್ಕಾರ ಈ ರೀತಿ ಹೇಳಿಯೇ ಇಲ್ಲ. ಜಿಲ್ಲಾಧಿಕಾರಿ ಯಾಕೆ ಹೀಗೆ ಹೇಳಿದ್ದಾರೋ ಗೊತ್ತಿಲ್ಲ. ಸ್ವತಃ ಪ್ರಧಾನ ಮಂತ್ರಿಯೇ ದೇಶದ ಎಲ್ಲ ಜನರಿಗೂ ಉಚಿತ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಾರೆ. ಪ್ರಧಾನಮಂತ್ರಿಗಿಂತ ಡಿಸಿ ದೊಡ್ಡವರಾ ಎಂದು ಪ್ರಶ್ನಿಸಿದರು. ಅಲ್ಲದೆ ಸರ್ಕಾರದ ಮುಂದೆ ಇಂತಹ ಯಾವುದೇ ಯೋಜನೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.