ಬೆಂಗಳೂರು: ಕೋವಿಡ್ ವ್ಯಾಕ್ಸಿನ್ ನೀಡುವ ನೆಪದಲ್ಲಿ ಆರೋಗ್ಯಾಧಿಕಾರಿಗಳಂತೆ ಮನೆಗೆ ಬಂದ ಗ್ಯಾಂಗ್ ಒಂದು ಮನೆಯಲ್ಲಿದ್ದವರನ್ನು ಗನ್ ಪಾಯಿಂಟ್ ನಲ್ಲಿ ಬೆದರಿಸಿ ದರೋಡೆ ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿರುವ ಘಟನೆ ಬೆಂಗಳೂರಿನ ಜಾಲಹಳ್ಳಿಯಲ್ಲಿ ನಡೆದಿದೆ.
ಆರೋಪಿ ದಿವಾಕರ್ ಅಲಿಯಾಸ್ ಕಾಳ ಗ್ಯಾಂಗ್ ಯಶವಂತಪುರದ ಸಂಪತ್ ಎನ್ನುವವರ ಮನೆಗೆ ವ್ಯಾಕ್ಸಿನ್ ನೀಡುವ ನೆಪದಲ್ಲಿ ಮೆಡಿಕಲ್ ಸ್ಟಾಫ್ ನಂತೆ ಆಗಮಿಸಿದ್ದರು. ಬಳಿಕ ಮನೆಯಲ್ಲಿದ್ದವರ ಹಣೆಗೆ ಗನ್ ಇಟ್ಟು ಬೆದರಿಸಿ, ಚಿನ್ನಾಭರಣ, ಹಣ, ಮೊಬೈಲ್ ದೋಚಿ ಪರಾರಿಯಾಗಿದ್ದರು.
ಅಲೆಕ್ಸಾದಲ್ಲಿ ಮಾರಣಾಂತಿಕ ಔಟ್ಲೆಟ್ ಚಾಲೆಂಜ್ ಸ್ವೀಕರಿಸಿದ 10 ವರ್ಷದ ಬಾಲಕಿ..!
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು. ಆರೋಪಿ ದಿವಾಕರ್ ಇದ್ದ ಸ್ಥಳದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆ ದಾಳಿ ನಡೆಸಿದ ಪೊಲೀಸರ ಮೇಲೆಯೇ ಚಾಕುವಿನಿಂದ ಇರಿದು ಎಸ್ಕೇಪ್ ಆಗಲು ಆರೋಪಿ ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿ ದಿವಾಕರ್ ಕಾಲಿಗೆ ಗುಂಡೇಟು ತಗುಲಿದ್ದು, ತಕ್ಷಣ ಬಂಧಿಸಿದ್ದಾರೆ.