ಅಜಯ್ ರಾವ್ ನಟನೆಯ ಶಂಕರ್ ಎಸ್ ರಾಜ್ ನಿರ್ದೇಶನದ ‘ಲವ್ ಯೂ ರಚ್ಚು’ ಸಿನಿಮಾದ ಲಿರಿಕಲ್ ವಿಡಿಯೋವೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇಂದು ರಚಿತಾ ರಾಮ್ ಹುಟ್ಟುಹಬ್ಬದ ಪ್ರಯುಕ್ತ ಈ ಹಾಡನ್ನು ರಿಲೀಸ್ ಮಾಡಿದ್ದಾರೆ.
ಜಗತ್ತಿನ ಅತಿ ಕುಳ್ಳ ಗೋವು ಎಂಬ ಶ್ರೇಯಕ್ಕೆ ಭಾಜನಳಾದ ರಾಣಿ
ಖ್ಯಾತ ಗಾಯಕ ಸಂಜೀತ್ ಹೆಗ್ಡೆ ಧ್ವನಿಯಲ್ಲಿ ಮೂಡಿಬಂದಿರುವ ‘ನೋಡುತಾ ನನ್ನನೇ’ ಎಂಬ ಈ ಹಾಡು ಗಾನಪ್ರಿಯರ ಗಮನ ಸೆಳೆದಿದೆ. ಕದ್ರಿ ಮಣಿಕಾಂತ್ ಈ ಹಾಡಿಗೆ ಸಂಗೀತ ಸಂಯೋಜನೆ ನೀಡಿದ್ದು ಪುನೀತ್ ಆಚಾರ್ಯ ಸಾಹಿತ್ಯವಿದೆ.