ನೀವು ಟೀ ಪ್ರಿಯರಾಗಿದ್ದರೆ ಬಗೆ ಬಗೆಯ ಟೀ ಕುಡಿಯಲು ಇಷ್ಟಪಡುವವರಾಗಿದ್ದರೆ ಲವಂಗದ ಟೀ ಕುಡಿದು ನೋಡಿ. ಇದು ಆರೋಗ್ಯಕ್ಕೆ ಒಳ್ಳೆಯದು. ಅದ್ರಲ್ಲೂ ಒಸಡು, ಹಲ್ಲಿಗೆ ಸಂಬಂಧಿಸಿದ ಸಮಸ್ಯೆಗೆ ಇದು ಪರಿಹಾರ ನೀಡಬಲ್ಲದು.
ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಸ್ವಚ್ಛಗೊಳಿಸಲು ಲವಂಗ ಸಹಾಯ ಮಾಡುತ್ತದೆ. ಹಲ್ಲು, ಒಸಡು ನೋವಿದ್ದರೆ ನೀವು ಲವಂಗದ ಟೀ ಕುಡಿಯಿರಿ.
ಗಂಟಲು ನೋವಿದ್ದರೆ, ಶೀತ ಅಥವಾ ಕೆಮ್ಮಿದ್ದರೆ ಕೂಡ ಲವಂಗದ ಟೀ ಸೇವನೆ ಮಾಡುವುದು ಒಳ್ಳೆಯದು.
ಜ್ವರದಿಂದ ಬಳಲುತ್ತಿದ್ದವರು ಕೂಡ ಲವಂಗದ ಟೀ ಸೇವನೆ ಮಾಡಬೇಕು. ಇದು ನೈಸರ್ಗಿಕ ಔಷಧಿಯಾಗಿದ್ದು, ಬೇಗ ಜ್ವರ ಕಡಿಮೆ ಮಾಡುತ್ತದೆ.
ದೇಹದ ಭಾಗಗಳು ಮತ್ತು ಸ್ನಾಯುಗಳಲ್ಲಿ ನೋವಿದ್ದರೆ ಲವಂಗ ಚಹಾವನ್ನು ಕುಡಿಯಿರಿ. ಇದು ನೋವು ಕಡಿಮೆ ಮಾಡಿ ದೇಹಕ್ಕೆ ಉತ್ತೇಜನ ನೀಡುತ್ತದೆ.
ಜೀರ್ಣಕಾರಿ ಸಮಸ್ಯೆಗಳಿಗೆ ಲವಂಗ ಚಹಾ ಪರಿಣಾಮಕಾರಿಯಾಗಿದೆ. ಹೊಟ್ಟೆಯ ಆಮ್ಲೀಯತೆ ಮತ್ತು ನಿಧಾನವಾಗಿ ಜೀರ್ಣಕ್ರಿಯೆಯಾಗ್ತಿದ್ದರೆ ಲವಂಗ ಚಹಾ ಕುಡಿಯುವುದು ತುಂಬಾ ಪ್ರಯೋಜನಕಾರಿ. ಇದು ಜೀರ್ಣಾಂಗ ವ್ಯವಸ್ಥೆಯ ಕಾರ್ಯವನ್ನು ಉತ್ತಮಗೊಳಿಸುತ್ತದೆ.
ಲವಂಗದಲ್ಲಿ ಮೆಗ್ನೀಸಿಯಮ್ ಕಂಡು ಬರುತ್ತದೆ. ಚಹಾ ಕುಡಿಯುವುದರಿಂದ ಬ್ಯಾಕ್ಟೀರಿಯಾದ ಸೋಂಕು ಕಡಿಮೆಯಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.