
ಪಲಾವ್ ಮಸಾಲೆಗಳಲ್ಲಿ ಬಳಸುವ ಸಾಮಗ್ರಿಗಳಲ್ಲಿ ಲವಂಗ ಕೂಡಾ ಒಂದು. ಇದರಲ್ಲಿ ಸೂಕ್ಷ್ಮಾಣುಗಳನ್ನು ಹೊಡೆದೋಡಿಸುವ ಗುಣವಿದೆ. ಬೇಧಿ ಉಂಟು ಮಾಡುವ ಬ್ಯಾಕ್ಟೀರಿಯಾಗಳು ಬೆಳೆಯದಂತೆ ನೋಡಿಕೊಳ್ಳುತ್ತವೆ.
ಲವಂಗದ ತುಂಡನ್ನು ಹಲ್ಲು ನೋವು ಇರುವ ಜಾಗಕ್ಕೆ ಇಟ್ಟುಕೊಳ್ಳುವುದರಿಂದ ಹಲ್ಲುನೋವಿನ ಬಾವು ಕಡಿಮೆಯಾಗುತ್ತದೆ. ಇದನ್ನು ಪುಡಿ ಮಾಡಿ ಇಟ್ಟುಕೊಂಡು ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ ಬಿಸಿ ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ದೇಹ ತೂಕವೂ ಕಡಿಮೆಯಾಗುತ್ತದೆ. ಕೊಲೆಸ್ಟ್ರಾಲ್ ಕೂಡಾ ನಿಯಂತ್ರಣಕ್ಕೆ ಬರುತ್ತದೆ.
ಲವಂಗದ ಒಂದು ಹನಿ ಎಣ್ಣೆಯನ್ನು ಬ್ರಶ್ ಗೆ ಹಾಕಿ ಹಲ್ಲುಜ್ಜುವುದರಿಂದ ಬಾಯಿಯ ದುರ್ವಾಸನೆ ಹಾಗು ಹಲ್ಲಿನ ಹಲವಾರು ಸಮಸ್ಯೆಗಳು ದೂರವಾಗುತ್ತವೆ.
ಮಧುಮೇಹಿಗಳ ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಿಸಲೂ ಇದು ನೆರವಾಗುತ್ತದೆ. ಸಾಮಾನ್ಯ ಶೀತ ಮತ್ತು ಕೆಮ್ಮು ಸಮಸ್ಯೆಗೆ ಲವಂಗದ ಪುಡಿಯಿಂದ ತಯಾರಿಸಿದ ಕಷಾಯ ಅತ್ಯುತ್ತಮ ಮದ್ದಾಗಬಲ್ಲದು.
ಕೆಲವರಿಗೆ ಪ್ರಯಾಣ ಮಾಡುವಾಗ ವಾಂತಿ ಬಂದ ಅನುಭವ ಆಗುವುದುಂಟು. ಅಂಥವರು ಪ್ರಯಾಣಿಸುವಾಗ ಬಾಯಲ್ಲಿ ಒಂದು ತುಂಡು ಲವಂಗವನ್ನು ಹಾಕಿಟ್ಟುಕೊಂಡರೆ ವಾಂತಿಯ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ.