ನರಕಚತುರ್ದಶಿಯ ಹಿಂದಿನ ದಿನ ತ್ರಯೋದಶಿಯನ್ನು ಧನತ್ರಯೋದಶಿ ಎಂದೂ ಕರೆಯುತ್ತಾರೆ. ಕುಬೇರ ಹಾಗೂ ಯಮರಾಜನ ಪೂಜೆಯನ್ನು ಧನತ್ರಯೋದಶಿಯಂದು ಮಾಡಲಾಗುತ್ತದೆ.
ಉತ್ತರ ದಿಕ್ಕು ಕುಬೇರನ ಸ್ಥಾನವಾಗಿದೆ. ಎಷ್ಟು ಸಾಧ್ಯವೋ ಅಷ್ಟು ಉತ್ತರ ದಿಕ್ಕನ್ನು ಖಾಲಿಯಾಗಿಡಿ. ಹಾಗೆ ಪ್ರತಿದಿನ ನೀರಿನಲ್ಲಿ ಸ್ವಚ್ಛಗೊಳಿಸಿ. ತಾಮ್ರದ ಪಾತ್ರೆಯಲ್ಲಿ ಗಂಗಾಜಲವನ್ನು ಹಾಕಿ, ಉತ್ತರ ದಿಕ್ಕು ಹಾಗೂ ತಿಜೋರಿಗೆ ಸಿಂಪಡಿಸಿ. ಈ ಮೂಲಕ ಕುಬೇರನ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಿ.
ಮಾವಿನ ಎಲೆ ಅಥವಾ ಬಿಲ್ವ ಪತ್ರೆಯ ಮಾಲೆ ಮಾಡಿ ಮನೆಯ ಮುಖ್ಯ ದ್ವಾರಕ್ಕೆ ಕಟ್ಟಿ.
ಕುಬೇರ ಅಥವಾ ತಾಯಿ ಲಕ್ಷ್ಮಿಯ ಫೋಟೋವನ್ನು ಉತ್ತರ ದಿಕ್ಕಿಗೆ ಇಡಿ.
ಮನೆಯ ಹೊರಗೆ ನಾಲ್ಕು ಕೋನಗಳ ದೀಪವನ್ನು ಬೆಳಗಿ.
ಬಣ್ಣ ಬಣ್ಣದ ರಂಗೋಲಿ ಬೆಳಗಲು ಮೊದಲೇ ಬಣ್ಣವನ್ನು ಸಿದ್ಧಪಡಿಸಿಟ್ಟುಕೊಳ್ಳಿ. ಅದಕ್ಕೆ ಸೂರ್ಯನ ಬೆಳಕು ಬೀಳುವಂತಿರಲಿ.
ವಾಸ್ತುಶಾಸ್ತ್ರದ ಪ್ರಕಾರ, ಮೂರು ದಿನ ಸ್ವಚ್ಛತಾ ಕೆಲಸ ಮಾಡಬೇಕು. ದೀಪಾವಳಿ ಮೊದಲ ದಿನ, ದೀಪಾವಳಿ ದಿನ ಹಾಗೂ ಮರುದಿನ ಮನೆಯನ್ನು ಸ್ವಚ್ಛಗೊಳಿಸಬೇಕು. ನೀರಿಗೆ ಉಪ್ಪನ್ನು ಸೇರಿಸಿ ಮನೆಯ ಪ್ರತಿ ಕೋಣೆಯನ್ನು ಸ್ವಚ್ಛಗೊಳಿಸಬೇಕು. ಇದರಿಂದ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ.
ಮನೆಯ ಮುಖ್ಯದ್ವಾರದಲ್ಲಿ ಕೆಂಪು ಕುಂಕುಮದಿಂದ ಸ್ವಸ್ಥಿಕ್ ಚಿಹ್ನೆಯನ್ನು ಬಿಡಿಸಿ. ಇದರಿಂದ ಸಂತೋಷ, ಸಮೃದ್ಧಿ ಮನೆ ಪ್ರವೇಶ ಮಾಡುತ್ತದೆ. ದುಃಖ, ದಾರಿದ್ರ್ಯ ಓಡಿ ಹೋಗುತ್ತದೆ.
ವಾಸ್ತ್ರ ಶಾಸ್ತ್ರದ ಪ್ರಕಾರ ಮನೆಯ 27 ವಸ್ತುಗಳನ್ನು ಸ್ಥಾನಪಲ್ಲಟ ಮಾಡಿ. ಪೊರಕೆಯನ್ನು ಬೇರೆ ಸ್ಥಳದಲ್ಲಿ ಇಟ್ಟರೂ ಅದು ಸ್ಥಾನಪಲ್ಲಟವಾಗುತ್ತದೆ. ಹೀಗೆ ಮಾಡಿದಲ್ಲಿ ನಿಂತ ನೀರಿನಂತಿರುವ ಜೀವನದಲ್ಲಿ ಅಭಿವೃದ್ಧಿ ಕಂಡು ಬರುತ್ತದೆ.