ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿಯಲ್ಲಿ ತಾಯಿ ಲಕ್ಷ್ಮಿ ಪೂಜೆಯನ್ನು ಅದ್ಧೂರಿಯಾಗಿ ಮಾಡಲಾಗುತ್ತದೆ. ಲಕ್ಷ್ಮಿ, ಧನವನ್ನು ಮಾತ್ರ ನೀಡುವುದಿಲ್ಲ. ಆರೋಗ್ಯ ಹಾಗೂ ಬುದ್ದಿ ವೃದ್ಧಿಯನ್ನು ಲಕ್ಷ್ಮಿ ಮಾಡ್ತಾಳೆ. ತಾಯಿಯನ್ನು ಒಲಿಸಿಕೊಳ್ಳಲು ಕೆಲವೊಂದು ಕೆಲಸವನ್ನು ಅವಶ್ಯಕವಾಗಿ ಮಾಡಬೇಕಾಗುತ್ತದೆ.
ಸಂಜೆ ವೇಳೆ ಹಾಲಿಗೆ ಜೇನು ತುಪ್ಪವನ್ನು ಹಾಕಿ. ಮನೆಯ ಪ್ರತಿಯೊಂದು ಮೂಲೆಗೂ ಅದನ್ನು ಸಿಂಪಡಿಸಿ. ಇದ್ರಿಂದ ಮನೆಯ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.
ದೀಪಾವಳಿಗೂ ಮುನ್ನ ಮನೆಯ ಪ್ರತಿಯೊಂದು ಕೋಣೆಯನ್ನು ಸ್ವಚ್ಛಗೊಳಿಸಿ. ಸುಂದರವಾಗಿರುವ ಮನೆಯಲ್ಲಿ ತಾಯಿ ಲಕ್ಷ್ಮಿ ನೆಲೆಸುತ್ತಾಳೆಂಬ ನಂಬಿಕೆಯಿದೆ.
ಧನ್ ತೇರಸ್ ನಿಂದ ದೀಪಾವಳಿ ಮುಗಿಯುವವರೆಗೂ ಪ್ರತಿ ದಿನ ಮನೆಯಲ್ಲಿ ದೀಪ ಹಚ್ಚಿ. ಮನೆಯ ಯಾವುದೇ ಜಾಗ ಕತ್ತಲಿರದಂತೆ ನೋಡಿಕೊಳ್ಳಿ.
ಮನೆಯ ಮುಖ್ಯ ಬಾಗಿಲಿನ ಬಳಿ ತಾಯಿ ಲಕ್ಷ್ಮಿಯ ಹೆಜ್ಜೆ ಗುರುತಿರಲಿ.
ಮನೆಯ ಮುಖ್ಯ ಬಾಗಿಲಿಗೆ ತೋರಣ ಕಟ್ಟಿ. ಮಾವಿನ ಎಲೆ, ಅಶ್ವತ್ಥ ಎಲೆ, ಅಶೋಕ ಮರದ ಎಲೆಗಳನ್ನು ಬಳಸಿ.
ನೀರಿನಿಂದ ತುಂಬಿದ ಪಾತ್ರೆ ಹಾಗೂ ಅದ್ರ ಮೇಲೆ ಬೆಳಗುತ್ತಿರುವ ದೀಪವನ್ನು ಮನೆಯಲ್ಲಿಡಿ. ಇದು ಮಂಗಳಕರ.
ದೀಪಾವಳಿ ಶುಭ ಸಂದರ್ಭದಲ್ಲಿ ನಕಾರಾತ್ಮಕ ಪ್ರಭಾವ ಬೀರುವ ಪೇಟಿಂಗ್ ಮನೆಯಲ್ಲಿಡಬೇಡಿ.
ಮನೆಯ ಈಶಾನ್ಯ ಭಾಗದಲ್ಲಿ ಸ್ವಸ್ತಿಕ್, ಓಂ ಹಾಗೂ ರಂಗೋಲಿಯಂತಹ ಮಂಗಳ ಚಿಹ್ನೆಯನ್ನು ಇಡಿ.
ಮನೆಯಲ್ಲಿ ಕೆಂಪು, ನೀಲಿ, ಕಿತ್ತಳೆ, ಹಸಿರು, ಬಿಳಿ ಮತ್ತು ಹಳದಿ ಬಣ್ಣದ ಲೈಟ್ ಹಾಕಿ. ಇದು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುತ್ತದೆ.