ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಸಂಪತ್ತು ತುಂಬಿರಲಿ ಎಂದು ದೀಪಾವಳಿಯಂದು ಲಕ್ಷ್ಮೀದೇವಿಯ ಪೂಜೆ ಮಾಡುತ್ತಾರೆ. ಆದರೆ ನೀವು ದೀಪಾವಳಿ ಹಬ್ಬದಂದು ಲಕ್ಷ್ಮಿ ಪೂಜೆಯ ಜೊತೆಗೆ ಈ ಒಂದು ಕೆಲಸ ಮಾಡಿದರೆ ಲಕ್ಷ್ಮಿಯ ಅನುಗ್ರಹದಿಂದ ಮುಂದಿನ ದೀಪಾವಳಿಯವರೆಗೂ ನಿಮಗೆ ಯಾವುದೇ ಹಣದ ಸಮಸ್ಯೆ ಎದುರಾಗುವುದಿಲ್ಲ.
ಮನೆಯಲ್ಲಿ ನಕರಾತ್ಮಕ ಶಕ್ತಿಗಳು ಇದ್ದಾಗ ಸಮಸ್ಯೆಗಳು ಕಾಡುತ್ತದೆ. ಆದ ಕಾರಣ ಲಕ್ಷ್ಮಿ ಅನುಗ್ರಹದಿಂದ ಈ ನಕರಾತ್ಮಕ ಶಕ್ತಿಗಳನ್ನು ಹೊರಹಾಕಿ ಸಕರಾತ್ಮಕ ಶಕ್ತಿಗಳನ್ನು ಮನೆಯೊಳಗೆ ಕರೆತರಲು ದೀಪಾವಳಿ ಹಬ್ಬದಂದು ತೆಂಗಿಕಾಯಿಯಿಂದ ಈ ಸಣ್ಣ ಪರಿಹಾರ ಮಾಡಿ.
ಪ್ರೀಮಿಯಂ ಪಾವತಿಸದ ಕಾರಣ ನಿಷ್ಕ್ರಿಯಗೊಂಡಿದೆಯಾ ಪಾಲಿಸಿ..? ವಿಮೆ ಪರಿಹಾರ ಕುರಿತಂತೆ ಸುಪ್ರೀಂ ಮಹತ್ವದ ಆದೇಶ
ದೀಪಾವಳಿ ಹಬ್ಬದಂದು ಬೆಳಿಗ್ಗೆ 5 ಗಂಟೆಗೆ ಎದ್ದ ತಕ್ಷಣ1 ತೆಂಗಿನಕಾಯಿ, ಕಲ್ಲು, ದಾರ ಇವಿಷ್ಟನ್ನು ತೆಗೆದುಕೊಂಡು ನದಿಯ ಬಳಿ ಹೋಗಿ ನೀರಿನಲ್ಲಿ ನಿಂತು ಕೈಯಲ್ಲಿ ತೆಂಗಿನಕಾಯಿಯನ್ನು ಇಟ್ಟುಕೊಂಡು ಲಕ್ಷ್ಮಿ ಯನ್ನು ಪ್ರಾರ್ಥಿಸಿ ತೆಂಗಿನಕಾಯಿಗೆ ಕಲ್ಲನ್ನು ಕಟ್ಟಿ (ಅದು ನೀರಿನಲ್ಲಿ ಹರಿದುಹೋಗದಂತೆ) ನೀರಿನಲ್ಲಿ ಬಿಟ್ಟು ಬನ್ನಿ.
ಬಳಿಕ ಸಂಜೆಯ ವೇಳೆ ಹೋಗಿ ತೆಂಗಿನಕಾಯಿಯನ್ನು ತೆಗೆದುಕೊಂಡು ಬಂದು ನೀರನ್ನು ಒಣಗಿಸಿ ಕಾಯಿಗೆ ಅರಶಿನ ಕುಂಕುಮ ಹಚ್ಚಿ ಕೆಂಪು ಅಥವಾ ಹಳದಿ ಬಣ್ಣದ ವಸ್ತ್ರದ ಮೇಲೆ ಇಟ್ಟು ಹೂವಿಟ್ಟು ದೀಪ ಹಚ್ಚಿ ಪೂಜೆ ಮಾಡಿ. ಮರುದಿನ ಅದನ್ನು ನಿಮ್ಮ ಹಣವಿಡುವ ಬೀರುವಿನಲ್ಲಿ ಅಥವಾ ದೇವರಕೋಣೆಯಲ್ಲಿಟ್ಟು ಪೂಜೆ ಮಾಡಿದರೆ ನಿಮಗೆ ಲಕ್ಷ್ಮಿ ಯ ಅನುಗ್ರಹ ದೊರೆಯುತ್ತದೆ.