ಖುಷಿ ಜೀವನವನ್ನು ಬಯಸುತ್ತಾನೆ. ಇದಕ್ಕಾಗಿ ಹಗಲು-ರಾತ್ರಿ ಕೆಲಸ ಮಾಡುತ್ತಾನೆ. ಆದ್ರೂ ಲಕ್ಷ್ಮಿ ಒಲಿಯುವುದಿಲ್ಲ. ಮಾಡಿದ ಕೆಲಸಕ್ಕೆ ತಕ್ಕ ಫಲ ಸಿಗುವುದಿಲ್ಲ. ಸಂಕಷ್ಟ ನಿವಾರಣೆಯಾಗುವುದಿಲ್ಲ. ಇದಕ್ಕೆ ನಾವು ಮಾಡುವ ಕೆಲವೊಂದು ಕೆಲಸವೇ ಕಾರಣವಾಗುತ್ತದೆ.
ಹೊರಗೆ ಹೋದವರು ಮನೆ ಪ್ರವೇಶ ಮಾಡುವ ಮೊದಲು ಕಾಲುಗಳನ್ನು ಸ್ವಚ್ಛವಾಗಿ ತೊಳೆದು ನಂತ್ರ ಮನೆಯೊಳಗೆ ಬನ್ನಿ. ಹೀಗೆ ಮಾಡದೆ ಹೋದಲ್ಲಿ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡುತ್ತದೆ.
ಪರ ಸ್ತ್ರೀಯನ್ನು ಎಂದೂ ಕೆಟ್ಟ ದೃಷ್ಟಿಯಲ್ಲಿ ನೋಡಬಾರದು. ಇದು ರಾಕ್ಷಸ ಬುದ್ದಿ ಎಂದು ನಂಬಲಾಗಿದೆ. ಇಂಥ ವ್ಯಕ್ತಿಗಳ ಮೇಲೆ ಎಂದೂ ದೇವಿ ಲಕ್ಷ್ಮಿ ಕೃಪೆ ತೋರುವುದಿಲ್ಲ.
ಮಹಿಳೆಯರು ಮನೆಯ ಲಕ್ಷ್ಮಿಗಳಿದ್ದಂತೆ. ಸದಾ ಗಲಾಟೆ-ಜಗಳ ಮಾಡುವ, ಮನೆಯ ಅಶಾಂತಿಗೆ ಕಾರಣವಾಗುವ ಮಹಿಳೆಯಿಂದ ಮನೆಯಲ್ಲಿ ನಿಧಾನವಾಗಿ ಬಡತನ ಆವರಿಸುತ್ತದೆ.
ಹಿರಿಯರು, ಮಹಿಳೆಯರು, ಸಂಬಂಧಿಕರಿಗೆ ಗೌರವ ನೀಡದ ಮನೆಯಲ್ಲಿ ಎಂದೂ ಲಕ್ಷ್ಮಿ ನೆಲೆಸುವುದಿಲ್ಲ.
ದೇವರ ಮೂರ್ತಿ ಹಾಗೂ ದೇವರ ಸಾಮಗ್ರಿಗಳನ್ನು ಎಂದೂ ನೆಲಕ್ಕೆ ಇಡಬೇಡಿ. ನೆಲಕ್ಕೆ ಇಡುವ ಅನಿವಾರ್ಯತೆ ಎದುರಾದ್ರೆ ಬಟ್ಟೆಯನ್ನಿಟ್ಟು ಅದ್ರ ಮೇಲಿಡಿ.
ಭಾನುವಾರ ಕಂಚಿನ ಪಾತ್ರೆಯಲ್ಲಿ ಆಹಾರ ತಯಾರಿಸಬೇಡಿ. ಹಾಗೆ ಆಹಾರ ಸೇವನೆ ಮಾಡಬೇಡಿ.
ಸೂರ್ಯಾಸ್ತದ ವೇಳೆ ಹಾಗೂ ಹಗಲಿನಲ್ಲಿ ದಂಪತಿ ಶಾರೀರಿಕ ಸಂಬಂಧ ಬೆಳೆಸಬಾರದು. ಇದ್ರಿಂದ ಲಕ್ಷ್ಮಿ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.