alex Certify ಲಕ್ಷಾಂತರ ರೂಪಾಯಿ ಲಾಭ ತಂದುಕೊಡುತ್ತೆ ಈ ಬೆಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ಷಾಂತರ ರೂಪಾಯಿ ಲಾಭ ತಂದುಕೊಡುತ್ತೆ ಈ ಬೆಳೆ

ನೌಕರಿಯೊಂದೇ ಜೀವನೋಪಾಯವಲ್ಲ. ನೀವು ಬಯಸಿದ್ರೆ ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಗಳಿಸಬಹುದು. ಲಕ್ಷಾಂತರ ರೂಪಾಯಿ ಸಂಬಳ ಬರ್ತಿದ್ದ ಅನೇಕರು ನೌಕರಿ ಬಿಟ್ಟು ಕೃಷಿ ಕ್ಷೇತ್ರಕ್ಕಿಳಿದು ಸಾಧನೆ ಮಾಡಿದ್ದಾರೆ.

ಹೊಸ ಹೊಸ ತಂತ್ರಜ್ಞಾನ, ಕೃಷಿ ವಿಧಾನಗಳನ್ನು ಬಳಸಿಕೊಂಡು, ಹೊಸ ಹೊಸ ಪ್ರಯೋಗಗಳನ್ನು ಮಾಡಿ ಉತ್ತಮ ಬೆಳೆ ಬೆಳೆದು ಲಾಭ ಪಡೆಯುತ್ತಿದ್ದಾರೆ. ಈಗ ಕೃಷಿ ಹಿಂದಿನಷ್ಟು ಕಠಿಣವಲ್ಲ.

ಒಂದು ಎಕರೆ ಪ್ರದೇಶದಲ್ಲಿ ಸೋರೆಕಾಯಿ ಬೆಳೆದು ನೀವು ಕೈತುಂಬಾ ಹಣ ಮಾಡಬಹುದು. ಅನೇಕ ಕಂಪನಿಗಳು ಸೋರೆಕಾಯಿ ಜ್ಯೂಸ್ ಮಾರಾಟ ಮಾಡುತ್ತಿವೆ. ಹಾಗಾಗಿ ಸೋರೆಕಾಯಿಗೆ ಬಹಳ ಬೇಡಿಕೆಯಿದೆ. ನೀವು ಸೋರೆಕಾಯಿ, ಸೋರೆಕಾಯಿ ಜ್ಯೂಸ್ ಇಲ್ಲವೇ ಸೋರೆಕಾಯಿ ಬೀಜವನ್ನು ಮಾರಾಟ ಮಾಡಬಹುದು.

ಅಲೋವೆರಾಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ. ಇದು ಬ್ಯೂಟಿ ಟಾನಿಕ್ ಇದ್ದಂತೆ. ಅನೇಕ ಸೌಂದರ್ಯ ಉತ್ಪನ್ನಗಳಲ್ಲಿ ಇದನ್ನು ಬಳಸಲಾಗ್ತಿದೆ. ಅಲೋವೆರಾ ಗಿಡ ಅಥವಾ ಎಲೆಯನ್ನು ನೀವು ಮಾರಾಟ ಮಾಡಬಹುದು.

ಅರಿಶಿನ ವಾಣಿಜ್ಯ ಕೃಷಿಯಾಗಿದೆ. ಇದನ್ನು ಔಷಧಿ ಹಾಗೂ ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಇದಕ್ಕೆ ಬಹು ಬೇಡಿಕೆಯಿದೆ. ಅರಿಶಿನ ಬೆಳೆದು ಕೈ ತುಂಬಾ ಹಣ ಸಂಪಾದನೆ ಮಾಡಬಹುದಾಗಿದೆ.

ಅಣಬೆ ಬೆಳೆದು ಜನರು ಕೈ ತುಂಬಾ ಗಳಿಸುತ್ತಿದ್ದಾರೆ. ಅಕ್ಟೋಬರ್-ನವೆಂಬರ್ ನಲ್ಲಿ ಈ ಬೆಳೆ ಶುರುವಾಗುತ್ತದೆ. ನಗರ ಪ್ರದೇಶಗಳಲ್ಲಿ ಅಣಬೆಗೆ ಉತ್ತಮ ಬೆಲೆ ಇದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...