ಲಂಡನ್ ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಬೀದರ್ ಮೂಲದ ಕನ್ನಡಿಗರೊಬ್ಬರು ಕನ್ನಡ ಧ್ವಜವನ್ನು ಹಾರಿಸುವ ಮೂಲಕ ತಮ್ಮ ನಾಡಪ್ರೇಮವನ್ನು ಮೆರೆದಿದ್ದಾರೆ.
ಆದೀಶ್ ಆರ್. ವಾಲಿ ಎಂಬವರು BayesBSchool ನಿಂದ ಮ್ಯಾನೇಜ್ಮೆಂಟ್ನಲ್ಲಿ ಮಾಸ್ಟರ್ಸ್ ಎಂಎಸ್ (MS) ಪದವಿ ಪಡೆದಿದ್ದು, ಪದವಿ ಸ್ವೀಕರಿಸಲು ವೇದಿಕೆಗೆ ಹೋದ ವೇಳೆ ನಾಡಧ್ವಜವನ್ನು ಹಾರಿಸಿದ್ದಾರೆ. ಈ ವೇಳೆ ಅವರ ಸ್ನೇಹಿತರು ಹರ್ಷೋದ್ಘಾರ ಮಾಡಿದ್ದಾರೆ.
ಅಲ್ಲದೇ ಈ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿರುವ ಆದೀಶ್ ಆರ್. ವಾಲಿ, “ನಾನು @CityUniLondon – @BayesBSchool ನಿಂದ ಮ್ಯಾನೇಜ್ಮೆಂಟ್ನಲ್ಲಿ ಮಾಸ್ಟರ್ಸ್ ಎಂಎಸ್ (MS) ಪದವಿ ಪಡೆದಿದ್ದೇನೆ. ಲಂಡನ್, ಬ್ರಿಟನ್ನಲ್ಲಿ ನಡೆದ ಸಮಾರಂಭದಲ್ಲಿ ನಾನು ನಮ್ಮ ಕರ್ನಾಟಕ ರಾಜ್ಯ ಧ್ವಜವನ್ನು ಹಾರಿಸಿದಾಗ ಹೆಮ್ಮೆಯ ಕ್ಷಣ” ಎಂದು ಹೇಳಿದ್ದಾರೆ.
https://youtu.be/AMSNBf1pPUg