ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ. ರೂಪಾ ನಡುವಿನ ನಡುವಿನ ವಾಕ್ಸಮರ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದರ ಮಧ್ಯೆ ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದ ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್ ರೆಡ್ಡಿ, ರೂಪಾ ಅವರ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದರು.
ಇದರ ಮಧ್ಯೆ ಈ ಇಬ್ಬರು ಅಧಿಕಾರಿಗಳ ನಡುವಿನ ಜಗಳ ಕೊನೆಗೊಳಿಸಲು ಸರ್ಕಾರ ಮಧ್ಯಪ್ರವೇಶಿಸಿದ್ದು, ಇಬ್ಬರಿಗೂ ನೋಟಿಸ್ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡಾ ಅಧಿಕಾರಿಗಳ ಈ ಜಗಳಕ್ಕೆ ಕಿಡಿ ಕಾರಿದ್ದಾರೆ.
ಇದೆಲ್ಲದರ ನಡುವೆಯೂ ಮತ್ತೊಂದು ಪೋಸ್ಟ್ ಹಾಕಿರುವ ಡಿ. ರೂಪಾ ಅವರು, ಸಿಂಧೂರಿ ಅವರ ಪತಿ ಪ್ರೆಸ್ ಮೀಟ್ ಮಾಡ್ತಾರೆ ಅಂದ್ರೆ ಏನರ್ಥ ? ರೋಹಿಣಿ ಸಿಂಧೂರಿಗೆ ಮೀಡಿಯಾದವರ ಸವಾಲು ಎದುರಿಸಲು ಧೈರ್ಯ ಇಲ್ಲವಾ ? ಉತ್ತರಗಳಿಲ್ಲವಾ ? ಅವರ ಪತಿ ಹೇಳೋದು ಫೋನ್ ಹ್ಯಾಕ್ ಮಾಡಲಾಗಿದೆ ಅಂತ. ನಂಬುವ ಮಾತೇ ? ಏನೋ ಹೇಳಬೇಕು ಪಾಪ. ಮಾನ ಹರಾಜು ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.