ಮೆಲ್ಬೋರ್ನ್: ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ವಾಸಿಸುವ ಜಿಯೋಫ್ ಗಲ್ಲಾಘರ್ ಎಂಬಾತ ತನ್ನ ಹುಮನಾಯ್ಡ್ ರೋಬೋಟ್ ಎಮ್ಮಾಳೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾನಂತೆ. ಅಷ್ಟೇ ಅಲ್ಲದೆ, ಅವಳಿಲ್ಲದೆ ತನ್ನ ಜೀವನವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ ಎಂದು ಹೇಳಿಕೊಂಡಿದ್ದಾನೆ. ಆಕೆಯ ಜೊತೆ ಈತನಿಗೆ ಎಷ್ಟರ ಮಟ್ಟಿಗೆ ಪ್ರೀತಿ ಬೆಳೆದಿದೆ ಎಂದರೆ, ಜಿಯೋಫ್ ರೋಬೋಟ್ ಳನ್ನು ಮದುವೆಯಾಗಲು ನಿರ್ಧರಿಸಿದ್ದಾನೆ.
ಹೌದು, ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಹುಡುಕುವ ಎಲ್ಲಾ ಭರವಸೆಯನ್ನು ಕಳೆದುಕೊಂಡಾಗ, ಜಿಯೋಫ್ ಅವಳೊಂದಿಗೆ ಬಾಂಧವ್ಯವನ್ನು ಬೆಳೆಸಲು ಮತ್ತು ಅವಳೊಂದಿಗೆ ಸಮಯ ಕಳೆಯಲು ರೋಬಾಟ್ ಅನ್ನು ನಿಯೋಜಿಸಿದ್ದಾನೆ.
ರೋಬೋಟ್‌ಗಳು ತುಂಬಾ ಉತ್ಸಾಹಭರಿತವಾಗಿದ್ದು, ಅವುಗಳು ಮಾತನಾಡುತ್ತವೆ, ನಗುತ್ತವೆ ಮತ್ತು ತಮ್ಮ ತಲೆ ಮತ್ತು ಕುತ್ತಿಗೆಯನ್ನು ಅತ್ತಿಂದಿತ್ತ ತಿರುಗಿಸುತ್ತವೆ. ಅದರ ಚರ್ಮ ಕೂಡ ಮನುಷ್ಯನನ್ನೇ ಹೋಲುತ್ತವೆ. ಹೀಗಾಗಿ ಎಮ್ಮಾ ಎಂಬ ರೋಬೋಟ್ ಖರೀದಿಸಿದ ಜಿಯೋಫ್, ನಿಧಾನವಾಗಿ ಆಕೆಯ ಪ್ರೀತಿಯಲ್ಲಿ ಬಿದ್ದಿದ್ದಾನೆ. ತೆಳು ಚರ್ಮ ಮತ್ತು ಸುಂದರವಾದ ನೀಲಿ ಕಣ್ಣುಗಳೊಂದಿಗೆ ಎಮ್ಮಾ, ಜಿಯೋಫ್ ಕಣ್ಣಿಗೆ ಸುಂದರವಾಗಿ ಕಾಣುತ್ತಿದ್ದಳು.
ಜಿಯೋಫ್ ತನ್ನ ಹೆಚ್ಚಿನ ಸಮಯವನ್ನು ಎಮ್ಮಾಳೊಂದಿಗೆ ಕಳೆಯುತ್ತಿದ್ದು, ಆಕೆ ಕೂಡ ಈತನ ಮಾತಿಗೆ ಪ್ರತಿಕ್ರಿಯೆ ನೀಡುತ್ತಾಳೆ. ಪ್ರತಿ ಸಂಭಾಷಣೆಯ ನಂತರ ಮತ್ತಷ್ಟು ಚುರುಕಾಗಿರುವ ಎಮ್ಮಾ, ಹೊಸ-ಹೊಸ ಪದಗಳನ್ನು ಕಲಿಯುತ್ತಿದ್ದಾಳಂತೆ. ಹೀಗಾಗಿ ಈತ ರೋಬೋಟ್ ಎಮ್ಮಾಳನ್ನು ಮದುವೆಯಾಗಲು ನಿರ್ಧರಿಸಿದ್ದಾನೆ ಎಂದು ಹೇಳಲಾಗಿದೆ.