
ಎಲ್ಲಾ ಕಡೆ ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ ಜಮಾನಾ ಶುರುವಾಗ್ತಿದೆ. ಯಮಹಾ ಕಂಪನಿ ಕೂಡ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನಗಳ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇ01 ಹಾಗೂ ನಿಯೋ ಎಂಬ ಎರಡು ಎಲೆಕ್ಟ್ರಿಕ್ ಟೂ ವ್ಹೀಲರ್ ಗಳನ್ನು ಜಪಾನ್ ಮೂಲದ ಯಮಹಾ ಕಂಪನಿ ತಯಾರಿಸಿದೆ.
ಇ01 , ಇ02 ಮಾದರಿಯನ್ನು ಹೊಂದಿದೆ. 50 ಸಿಸಿ ಸ್ಕೂಟರ್ ಗೆ ಸರಿಸಮನಾಗಿ ನಿಯೋವನ್ನು ರೆಡಿ ಮಾಡಲಾಗಿದೆ. ಪೆಟ್ರೋಲ್ ಚಾಲಿತ 50 ಸಿಸಿ ಸ್ಕೂಟರ್ ನಿಯೋ ಈಗಾಗಲೇ ಹಲವಾರು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದೆ.
ಎಲೆಕ್ಟ್ರಿಕ್ ಮೋಟಾರ್ ಗೆ 2 ಕಿಲೋ ವ್ಯಾಟ್ ಪವರ್ ಬೇಕು. ಬದಲಾಯಿಸಬಹುದಾದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಇ01 ವಾಹನ ಕೂಡ ಪ್ರೊಡಕ್ಷನ್ ಹಂತದಲ್ಲಿದೆ. ಇದು 125cc ಪೆಟ್ರೋಲ್ ಸ್ಕೂಟರ್ ನಷ್ಟೇ ಶಕ್ತಿಶಾಲಿ. ಇದರಲ್ಲಿ ಇಕೋ, ನಾರ್ಮಲ್ ಹಾಗೂ ಪವರ್ ಮೋಡ್ ಅಳವಡಿಸಲಾಗಿದೆ. ಇ01 ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಸಂಪೂರ್ಣ ಡಿಜಿಟಲ್ ಪ್ಯಾನೆಲ್ ಇರುವುದು ಮತ್ತೊಂದು ವಿಶೇಷ.
ಬ್ಯಾಟರಿಯ ಸ್ಥಿತಿ, ವೇಗ ಮುಂತಾದ ಮಾಹಿತಿಯನ್ನು ಇದು ಪ್ರದರ್ಶಿಸುತ್ತದೆ. ಕೀ ರಹಿತ ಇಗ್ನಿಷನ್ ಸಿಸ್ಟಮ್ ಮತ್ತು ಬ್ಲೂಟೂತ್ ಅನ್ನು ಕೂಡ ಅಳವಡಿಸುವ ನಿರೀಕ್ಷೆ ಇದೆ. ಯಮಹಾ ಎಲೆಕ್ಟ್ರಿಕ್ ಸ್ಕೂಟರ್ ಮೊದಲು ಯುರೋಪ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.