ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೋ ಮೋಟೋ ಕಾರ್ಪ್, ನವೀಕರಿಸಿದ Xpulse 200 4V ಬೈಕ್ ಅನ್ನು ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ 1.44 ಲಕ್ಷ ರೂಪಾಯಿ. ಈ ಸಾಹಸಿ ಮೋಟಾರ್‌ಸೈಕಲ್ ಎರಡು ರೂಪಾಂತರಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಹೊಸ ವೈಶಿಷ್ಟ್ಯಗಳೊಂದಿಗೆ ನವೀಕರಿಸಿದ ಎಂಜಿನ್ ಇದರ ವಿಶೇಷತೆ. XPulse 200 4V ವಿನ್ಯಾಸ ಕೂಡ ಅದ್ಭುತವಾಗಿದೆ.
ಹೊಸ 60 mm ಉದ್ದದ ವಿಸರ್, ನವೀಕರಿಸಿದ ಸ್ವಿಚ್ ಗೇರ್, H- ಆಕಾರದ LED DRL ಗಳೊಂದಿಗೆ ಎಲ್ಲಾ-LED ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ. ಹಿಂದಿನದಕ್ಕೆ ಹೋಲಿಸಿದರೆ ರೈಡರ್ ತ್ರಿಕೋನದಲ್ಲೂ ಬದಲಾವಣೆ ಇದೆ.ವಾಸ್ತವವಾಗಿ ಸವಾರನ ಅನುಕೂಲಕ್ಕಾಗಿ ಪಾದದ ಪೆಗ್‌ನ ಸ್ಥಳವನ್ನು ಬದಲಾಯಿಸಲಾಗಿದೆ. Hero XPulse 200 4V ಈಗ ಬಹು ABS ಮೋಡ್‌ಗಳನ್ನು ಪಡೆಯುತ್ತದೆ. ಸಾಮಾನ್ಯವಾದ ರಸ್ತೆಗಳಲ್ಲಿ ಇದನ್ನು ಚಲಾಯಿಸಬಹುದು. ಆಫ್-ರೋಡ್ ಮತ್ತು ರ್ಯಾಲಿಗೂ ಇದು ಹೇಳಿ ಮಾಡಿಸಿದಂತಿದೆ.
ಹೊಸ Xpulse 200 4V ಅದೇ 199.6cc, ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್, ಫೋರ್-ಸ್ಟ್ರೋಕ್, ಫೋರ್-ವಾಲ್ವ್ ಎಂಜಿನ್‌ನಿಂದ ಚಾಲಿತವಾಗಿದೆ. ಇದು E20 ಇಂಧನದಲ್ಲಿಯೂ ಕಾರ್ಯನಿರ್ವಹಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾಗುತ್ತದೆ. 2023 Hero XPulse 200 4V ಅನ್ನು ಎರಡು ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ – ಸ್ಟ್ಯಾಂಡರ್ಡ್ ಮತ್ತು ಪ್ರೊ.
ಇದರ ಸ್ಟ್ಯಾಂಡರ್ಡ್ ವೇರಿಯಂಟ್ ಬೆಲೆ 1.44 ಲಕ್ಷ ರೂಪಾಯಿ ಆಗಿದ್ದರೆ ಪ್ರೊ ವೇರಿಯಂಟ್ ಬೆಲೆ 1.51 ಲಕ್ಷ ರೂಪಾಯಿ. Xpulse 200 4V ನ ಪ್ರೊ ರೂಪಾಂತರವು ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸಸ್ಪೆನ್ಶನ್ ಅನ್ನು ಪಡೆಯುತ್ತದೆ. ಹಿಂಭಾಗದಲ್ಲಿ 10-ಹಂತದ ಹೊಂದಾಣಿಕೆ ಮಾಡಬಹುದಾದ ಸಸ್ಪೆನ್ಷನ್ ಇದೆ. ಉತ್ತಮ ಆಫ್-ರೋಡ್ ಅನುಭವಕ್ಕಾಗಿ ಉದ್ದದ ಸೀಟ್, ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಎತ್ತರದ ಹ್ಯಾಂಡಲ್‌ಬಾರ್ ಅನ್ನು ಅಳವಡಿಸಲಾಗಿದೆ.