ಉಡುಪಿ ಜಿಲ್ಲೆ ಕುತ್ಪಾಡಿಯ ಎಸ್.ಡಿ.ಎಂ. ಫಾರ್ಮಸಿಯಿಂದ ಅತ್ಯುತ್ಕೃಷ್ಟ ಆಯುಷ್ ಕ್ವಾಥ ಎಂಬ ಕಷಾಯವನ್ನು ಬಿಡುಗಡೆ ಮಾಡಲಾಗಿದ್ದು, ಪ್ರಸ್ತುತ ಕೊರೊನಾ ಭೀತಿ ಹೆಚ್ಚಾಗಿರುವ ಸಂದರ್ಭದಲ್ಲಿ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.
ಶುಂಠಿ, ಕರಿಮೆಣಸು, ದಾಲ್ಚಿನ್ನಿ, ತುಳಸಿಯ ಮಿಶ್ರಣವನ್ನು ಹೊಂದಿರುವ ಇದು ಪ್ರಮಾಣೀಕರಿಸಿದ ಪ್ರಾಕೃತಿಕ ಆರೋಗ್ಯವರ್ಧಕ ಕಷಾಯವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಶೀತ, ನೆಗಡಿ, ಕೆಮ್ಮು, ಗಂಟಲು ಬಾಧೆಯನ್ನು ನಿವಾರಿಸುತ್ತದೆ.
10 ಮಿಲಿ ಲೀಟರ್ ಕಷಾಯಕ್ಕೆ 50 ಮಿಲಿ ಲೀಟರ್ ಕುದಿಸಿದ ನೀರು ಸೇರಿಸಿ ಚೆನ್ನಾಗಿ ಬೆರೆಸಿ ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ನಿಂಬೆ ರಸ ಬೆರೆಸಿಕೊಂಡು ಚಹಾದಂತೆ ದಿನಕ್ಕೆ ಎರಡು ಬಾರಿ ಸೇವಿಸಬಹುದಾಗಿದೆ.