
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸರಳ ಪಾನೀಯವನ್ನು ಮಾಡುವ ವಿಧಾನವನ್ನು ತಿಳಿಯೋಣ. ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಕುಡಿಯಬಹುದು.
ಒಂದು ಕಪ್ ರಾಗಿಯನ್ನು ಸ್ವಚ್ಛಗೊಳಿಸಿ, ರಾತ್ರಿ ನೀರಿನಲ್ಲಿ ನೆನೆಸಿ. 1 ಕಪ್ ರಾಗಿಗೆ 2 ಕಪ್ ನಷ್ಟು ನೀರು ಬೇಕು. ಇದನ್ನು ನಾಲ್ಕು ಜನ ಕುಡಿಯಬಹುದು.
ಬೆಳಗ್ಗೆ ಇದನ್ನು ಮಿಕ್ಸಿಯಲ್ಲಿ ರುಬ್ಬಿ ಮತ್ತೆ ಸೋಸಿ. ಒಂದು ಮುಷ್ಟಿ ಕಡಲೆಕಾಯಿ ಬೀಜವನ್ನು ಹಿಂದಿನ ರಾತ್ರಿಯೇ ನೆನೆಸಿಟ್ಟು ತುಸು ತೆಂಗಿನ ತುರಿ ಬೆರೆಸಿ ರುಬ್ಬಿ. ರಾಗಿ ಹಾಲನ್ನು ಐದರಿಂದ ಹತ್ತು ನಿಮಿಷಗಳ ಕಾಲ ಬಿಸಿ ಮಾಡಿ ಗಂಟು ಬರದ ರೀತಿ ನೋಡಿಕೊಳ್ಳಿ.
ತುಸು ಬೆಲ್ಲ ಸೇರಿಸಿ ಕುದಿಸಿ. ತೆಂಗಿನಕಾಯಿ ಮಿಶ್ರಣ, ಏಲಕ್ಕಿ ಪುಡಿ ಹಾಕಿ. ಕೊನೆಗೆ ಕೊಂಚ ತುಪ್ಪವನ್ನು ಹಾಕಿ ಮಿಶ್ರಣ ಮಾಡಿ. ಈ ಆರೋಗ್ಯಕರ ಪಾನೀಯನ್ನು ಬೆಳಿಗ್ಗೆ ತಿಂಡಿ ತಿನ್ನುವ ಅರ್ಧ ಗಂಟೆಯ ಮುಂಚೆ ಕುಡಿಯಬೇಕು. ರುಚಿ ಚೆನ್ನಾಗಿರುವುದರಿಂದ ಮಕ್ಕಳು ಸಹ ಇಷ್ಟಪಟ್ಟು ಕುಡಿಯುತ್ತಾರೆ. ಇದರಿಂದ ಆರೋಗ್ಯಕರ ಜೀವನ ನಿಮ್ಮದಾಗುತ್ತದೆ.