ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಮಾತ್ರ ನೀವು ಹಲವು ರೋಗಗಳಿಂದ ನಿಮ್ಮ ದೇಹವನ್ನು ರಕ್ಷಿಸಿಕೊಳ್ಳಬಹುದು. ಆಹಾರ ಸೇವನೆಯ ಹೊರತಾಗಿ ಕೆಲವಷ್ಟು ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದಲೂ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ದಿನಾ ಬೆಳಗ್ಗೆ ವ್ಯಾಯಾಮ ಅಥವಾ ಜಾಗಿಂಗ್ ಮಾಡುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಆಟ-ಓಟ-ಹಾಡು-ನೃತ್ಯಗಳ ಮೂಲಕವೂ ಇಮ್ಯೂನಿಟಿ ಹೆಚ್ಚಿಸಿಕೊಳ್ಳಬಹುದು ಎಂಬುದುನ್ನು ಸಂಶೋಧನೆಯೊಂದು ದೃಢಪಡಿಸಿದೆ.
ರಾತ್ರಿ ಉತ್ತಮ ನಿದ್ದೆ ಮಾಡುವುದರಿಂದಲೂ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ವಿಪರೀತ ಮಧ್ಯಪಾನ ಮತ್ತು ಧೂಮಪಾನದಿಂದ ದೇಹದ ಪ್ರತಿರೋಧಕ ಶಕ್ತಿ ಕುಸಿಯುತ್ತದೆ. ಇದನ್ನು ದೂರವಿಡುವುದರಿಂದ ನೀವು ಸ್ಟ್ರಾಂಗ್ ಆಗಬಹುದು.
ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದರಿಂದ, ಮನೆಯಿಂದ ಹೊರಗಿನ ಆಹಾರ ಸೇವನೆಯನ್ನು ಕಡಿಮೆ ಮಾಡುವುದರಿಂದಲೂ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.