ಬಹುತೇಕರು ಇಷ್ಟಪಟ್ಟು ತಿನ್ನುವ ತೊಂಡೆಕಾಯಿ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ..? ತೊಂಡೆಕಾಯಿಯಲ್ಲಿ ಹೆಚ್ಚು ಫೈಬರ್ ಅಂಶವಿದ್ದು, ಇದರಲ್ಲಿ ಎ, ಬಿ1, ಸಿ, ಮತ್ತು ಕ್ಯಾಲ್ಸಿಯಂ ಇದೆ.
ತೊಂಡೆಕಾಯಿ ಹೆಚ್ಚಾಗಿ ಸೇವನೆ ಮಾಡುವುದರಿಂದ ಕಫದಂತಹ ಸಮಸ್ಯೆಗಳನ್ನು ದೂರ ಮಾಡಬಹುದು. ತೊಂಡೆಕಾಯಿಯ ಬೀಜಗಳು ಮಲಬದ್ದತೆ ಸಮಸ್ಯೆಯನ್ನು ನಿವಾರಿಸುತ್ತದೆ. ಮಲ ವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸುತ್ತದೆ.
ದೇಹದ ಯಾವುದೇ ಭಾಗದಲ್ಲಿ ಹುಳು ಕಚ್ಚಿ ಗುಳ್ಳೆ ಆದರೆ ತೊಂಡೆಕಾಯಿ ಎಲೆಗಳನ್ನು ಜಜ್ಜಿ ಹಚ್ಚಿದರೆ ನೋವು ನಿವಾರಣೆ ಆಗುತ್ತದೆ.
ತೊಂಡೆಕಾಯಿಯಲ್ಲಿ ರೋಗ ನಿರೋಧಕ ಶಕ್ತಿ ಇದೆ. ತೊಂಡೆಕಾಯಿ ಎಲೆ ರಸವನ್ನು ನೀರಿನಲ್ಲಿ ಬೆರೆಸಿ ದಿನಕ್ಕೆ 3 ಬಾರಿ ಸೇವನೆ ಮಾಡಿದರೆ ದೇಹದ ಉಷ್ಣತೆ ಕಡಿಮೆ ಆಗುತ್ತದೆ. ಎರಡು ಚಮಚ ತೊಂಡೆಕಾಯಿ ಎಲೆ ರಸವನ್ನು ಅರ್ಧ ಬಟ್ಟಲು ಮೊಸರಿನ ಜೊತೆ ದಿನಕ್ಕೆ ಎರಡು ಬಾರಿ ಸೇವಿಸಿದರೆ ಬೇಧಿ ಕಡಿಮೆ ಆಗುತ್ತದೆ.
ತೊಂಡೆಕಾಯಿ ಹಸಿ ಹಣ್ಣನ್ನು ದಿನಕ್ಕೆ ಎರಡರಂತೆ ಸೇವಿಸಿದರೆ ಒಣಗಿರುವ ಚರ್ಮ ಮೃದು ಆಗುತ್ತದೆ ಮತ್ತು ಮಧುಮೇಹ ದೂರವಾಗುತ್ತದೆ.