ಈಗ ಎಲ್ಲರಿಗೂ ಆರೊಗ್ಯದ ಮೇಲೆ ವಿಪರೀತವಾದ ಕಾಳಜಿ ಬಂದು ಬಿಟ್ಟಿದೆ. ಟೀ – ಕಾಫಿ ಕುಡಿಯುವವರು ಕಷಾಯದತ್ತ ಮುಖ ಮಾಡುತ್ತಿದ್ದಾರೆ. ಮಾರ್ಕೆಟ್ ನಿಂದ ತಂದ ಕಷಾಯದ ಪುಡಿಗಿಂತ ಮನೆಯಲ್ಲಿಯೇ ಸುಲಭವಾಗಿ ಕಷಾಯ ಪುಡಿ ಮಾಡಿ. ಇದು ನಿಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಬೇಕಾಗುವ ಸಾಮಾಗ್ರಿಗಳು:
½ ಕಪ್ – ಧನಿಯಾ ಬೀಜ, ¼ ಕಪ್ – ಜೀರಿಗೆ, ಕಾಳುಮೆಣಸು – 1/4 ಕಪ್, ಸೋಂಪು – 1/4 ಕಪ್, ಲವಂಗ – 10, ಏಲಕ್ಕಿ – 2, ಹಿಪ್ಪಲಿ – 10, ಅಶ್ವಗಂಧದ ಬೇರು – 10, ಸೊಗದೆ ಬೇರು – 4 ಪೀಸ್, ಜೇಷ್ಠ ಮಧು – 1 ಇಂಚಿನದ್ದು 1 ಪೀಸ್, ಲಾವಂಚ ಬೇರು – ಒಂದು ಹಿಡಿ, ಅರಿಶಿನದ ಕೊಂಬು – 1 ಪೀಸ್, ಜಾಯಿಕಾಯಿ – 1, ಒಣಶುಂಠಿ – 1 ಇಂಚಿನದ್ದು 1 ತುಂಡು, ಬಜೆ – 1 ಇಂಚಿನಷ್ಟು.
ಮಾಡುವ ವಿಧಾನ:
ಮೊದಲಿಗೆ ಒಂದು ಕುಟ್ಟುವ ಕಲ್ಲಿನಲ್ಲಿ ಅರಿಶಿನದ ಕೊಂಬು, ಅಶ್ವಗಂಧದ ಬೇರು, ಸೊಗದೆ ಬೇರು, ಒಣಶುಂಠಿ, ಜಾಯಿಕಾಯಿ, ಬಜೆ, ಜೇಷ್ಠಮಧು, ಹಿಪ್ಪಲಿ ಇವನ್ನೆಲ್ಲಾ ಒಂದೊಂದಾಗಿ ಕುಟ್ಟಿ ಸ್ವಲ್ಪ ಪುಡಿ ಮಾಡಿಕೊಳ್ಳಿ.
ನಂತರ ಒಂದು ಮಿಕ್ಸಿ ಜಾರಿಗೆ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಸಣ್ಣಗೆ ಪುಡಿ ಮಾಡಿಕೊಳ್ಳಿ. ಇದನ್ನು ಒಂದು ಗಾಜಿನ ಡಬ್ಬದಲ್ಲಿ ಸ್ಟೋರ್ ಮಾಡಿಟ್ಟುಕೊಳ್ಳಿ. ಕಷಾಯ ಮಾಡುವಾಗ ಉಪಯೋಗಿಸಿ.