ದೇಹಕ್ಕೆ ಪದೇ ಪದೇ ರೋಗಗಳು ಕಾಡದಂತೆ ಮಾಡಲು ರೋಗ ನಿರೋಧಕ ಶಕ್ತಿ ಬಲಪಡಿಸಿಕೊಳ್ಳುತ್ತಿರುವುದು ಬಹಳ ಮುಖ್ಯ. ಕ್ಯಾರೆಟ್ ನಲ್ಲಿ ಅಂಥದ್ದೇ ಒಂದು ಗುಣವಿದ್ದು ಇದರ ಜ್ಯೂಸ್ ಸೇವನೆಯಿಂದ ನೀವು ಹಲವು ರೋಗಗಳಿಂದ ಮುಕ್ತಿ ಹೊಂದಬಹುದು.
ಕ್ಯಾರೆಟ್ ಜ್ಯೂಸ್ ತಯಾರಿಸುವಾಗ ಚಿಟಿಕೆ ಅರಶಿನ, ಒಂದು ಚಮಚ ಕರಿಮೆಣಸಿನ ಪುಡಿ ಸೇರಿಸಿ. ಅರಿಶಿನದಲ್ಲಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಗುಣವಿದ್ದರೆ ಕರಿಮೆಣಸು ಶೀತ, ಜ್ವರದಂತ ಸಣ್ಣ ಪುಟ್ಟ ಕಾಯಿಲೆಗಳು ಬರದಂತೆ ತಡೆಯುತ್ತವೆ.
ಇವೆಲ್ಲವನ್ನೂ ಜೊತೆಗೆ ಸೇರಿಸಿ ನಯವಾಗಿ ರುಬ್ಬಿ. ನಿಮಗೆ ಬೇಕಿರುವಷ್ಟು ನೀರು ಬಳಸಿ. ಹೆಚ್ಚಿದರೆ ರುಚಿ ಕೆಡಬಹುದು. ಬೇಕಿದ್ದರೆ ತುಸು ಬೆಲ್ಲ ಸೇರಿಸಿ ಕುಡಿಯಿರಿ.
ಇದರ ಪರಿಮಳ ಇಷ್ಟವಾಗದಿದ್ದರೆ ನೀರಿನ ಬದಲು ಹಾಲು ಬೆರೆಸಿ ನೋಡಿ. ಮಿಲ್ಕ್ ಶೇಕ್ ರುಚಿ ಕೊಡುವ ಇದನ್ನು ಮಕ್ಕಳಿಗೆ ಕುಡಿಸುವುದು ಬಲು ಸುಲಭ.
ನಿತ್ಯ ಇದನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನಿಶ್ಯಕ್ತಿಯಿಂದ ಬಳಲುವವರಿಗೂ ಇದು ಹೇಳಿ ಮಾಡಿಸಿದ ಪಾನೀಯ. ರಕ್ತಹೀನತೆಯಂಥ ಸಮಸ್ಯೆಯಿಂದಲೂ ಇದು ಮುಕ್ತಿ ನೀಡುತ್ತದೆ.