ಮನೆ, ರಸ್ತೆ ಚರಂಡಿಗಳಲ್ಲಿ ನೊಣಗಳದೇ ಕಾರುಬಾರು. ಮನಬಂದಂತೆ ಊಟದ ಎಲೆ, ತಿಂಡಿಗಳ ಮೇಲೆ ಕೂರುವ ಇವು ನಮಗೆ ತುಂಬಲಾರದ ನಷ್ಟ ಮಾಡುತ್ತವೆ. ಇದು ರೋಗವನ್ನು ಹರಡುವ ಮುಖ್ಯ ಕೀಟವಾಗಿದೆ.
ನೊಣ, ಆಹಾರವನ್ನು ತಿನ್ನುವ ರೀತಿ ತುಂಬ ವಿಚಿತ್ರ. ಆಹಾರದ ಮೇಲೆ ಕೂರುವ ಇದು, ಮೊದಲು ಅದರ ಮೇಲೆ ಜೊಲ್ಲು ರಸ (saliva)ವನ್ನು ಮತ್ತು ಇತರ ಜೀರ್ಣರಸ (digestive juices) ಗಳನ್ನು ಬಿಡುತ್ತದೆ. ಇದರಿಂದಲೇ ಆಹಾರ ಅಧಿಕ ಪ್ರಮಾಣದಲ್ಲಿ ಮಲಿನಗೊಳ್ಳುತ್ತವೆ. ಇವು ಅನೇಕ ಭಯಂಕರ ರೋಗಾಣುಗಳನ್ನು ಹರಡುತ್ತವೆ.
ನೊಣ ಇನ್ನೊಂದು ರೀತಿಯಲ್ಲಿ ಆಹಾರವನ್ನು ಕಲುಷಿತಗೊಳಿಸುತ್ತವೆ. ಅವು ತಮ್ಮ ಕಾಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಕಾಲ್ಗಳನ್ನು ಪರಸ್ಪರ ಉಜ್ಜಿಕೊಳ್ಳುತ್ತವೆ. ಹೀಗೆ ಮಾಡಿದಾಗ ಅವುಗಳ ಕಾಲಿನಲ್ಲಿರುವ ರೋಗಾಣುಗಳು ಆಹಾರದ ಮೇಲೆ ಬೀಳುತ್ತವೆ.
ನೊಣಗಳು ಆಹಾರವನ್ನು ಕಲುಷಿತಗೊಳಿಸುವುದರಿಂದ ಟೈಫಾಯಿಡ್, ಕ್ಷಯ ಮತ್ತು ಆಮಶಂಕೆ ಮುಂತಾದ ರೋಗಗಳು ಕಾಣಿಸಿಕೊಳ್ಳುತ್ತವೆ. ಹವಾಮಾನ ತಣ್ಣಗಿದ್ದರೆ ಹೆಚ್ಚುಕಾಲ ಬದುಕುವ ಇವು ಬಿರು ಬೇಸಿಗೆಯಲ್ಲಿ ಸಾಯುತ್ತವೆ. ಹಾಗಾಗಿ ಇಂತಹ ರೋಗಗಳನ್ನು ಉಂಟು ಮಾಡುವ ನೊಣಗಳಿಂದ ಹುಷಾರಾಗಿರಿ.