ಇವುಗಳಲ್ಲಿ ಬಿ5 ಜೀವಸತ್ವ ಹೇರಳವಾಗಿರುತ್ತದೆ. ಸದಾ ಇದನ್ನು ಆಹಾರದ ಭಾಗವಾಗಿ ತೆಗೆದುಕೊಂಡರೆ ಜೀವ ಕ್ರಿಯೆಯ ಪ್ರಮಾಣ ಹೆಚ್ಚಾಗುತ್ತದೆ. ರಕ್ತಹೀನತೆಯಿಂದ ತೊಂದರೆ ಎದುರಿಸುತ್ತಿರುವವರು ಇದನ್ನು ಹೆಚ್ಚು ಸೇವಿಸುವುದು ಒಳಿತು.
ಮೆಕ್ಕೆಜೋಳ
ಇದರ ಬೀಜಗಳಲ್ಲಿ ಮಿನರಲ್, ಆಂಟಿಆಕ್ಸಿಡೆಂಟ್, ವಿಟಮಿನ್ ಬಿ5 ಹೇರಳವಾಗಿರುತ್ತದೆ. ಪ್ರತಿದಿನ ಬೇಯಿಸಿದ ಮುಸುಕಿನ ಜೋಳ ಒಂದು ಕಪ್ ಸೇವಿಸಿದರೆ ದೇಹಕ್ಕೆ ತಕ್ಷಣ ಶಕ್ತಿ ದೊರಕುತ್ತದೆ. ಕೆಂಪು ರಕ್ತಕಣಗಳು ವೃದ್ಧಿಯಾಗುತ್ತವೆ.
ನಟ್ಸ್
ಪ್ರತಿದಿನ ಗೋಡಂಬಿ, ಬಾದಾಮಿ, ಒಣ ದ್ರಾಕ್ಷಿ ಮಿಶ್ರ ಮಾಡಿ ಒಂದು ಹಿಡಿಯಷ್ಟು ಸೇವಿಸಿದರೆ ದೇಹಕ್ಕೆ ಅಗತ್ಯವಾದ ವಿಟಮಿನ್ ಬಿ5 ದೊರಕುತ್ತದೆ.
ಸೂರ್ಯಕಾಂತಿ ಬೀಜ
ಸೂರ್ಯಕಾಂತಿ ಬೀಜವನ್ನು ಆಹಾರದ ಭಾಗವಾಗಿ ಮಾಡಿಕೊಂಡರು ಸಹ ಉತ್ತಮ ಫಲಿತಾಂಶ ಹೊಂದಬಹುದಾಗಿದೆ. ದೇಹದಲ್ಲಿ ರಾಸಾಯನಿಕ ಅಂಶಗಳು ಆರಾಮವಾಗಿ ನಡೆಯಲು ಇದು ಸಹಾಯಕಾರಿ. ಗರ್ಭಿಣಿಯರು ಇದರ ಸೇವನೆ ಮಾಡಿದಲ್ಲಿ ಗರ್ಭದಲ್ಲಿರುವ ಮಕ್ಕಳಿಗೆ ಒಳಿತು.
ಮಾಂಸ
ಮಾಂಸಹಾರಿಗಳು ಸದಾ ಮೊಟ್ಟೆ, ಮೀನನ್ನು ಸೇವಿಸಬೇಕು. ಶಾಖಾಹಾರಿಗಳು ಹಾಲು-ಮೊಸರು ಸೇವಿಸಬೇಕು. ಇದರಲ್ಲಿ ವಿಟಮಿನ್ ಬಿ5 ಹೇರಳವಾಗಿದ್ದು, ದೇಹವನ್ನು ದೃಢವಾಗಿಡುತ್ತದೆ.