ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಬೆಲ್ಲದ ಬಗ್ಗೆ ತಿಳಿದಿರುವ ಹಲವರಿಗೆ ತಾಳೆಮರದ ಬೆಲ್ಲದ ಬಗ್ಗೆ ಗೊತ್ತಿರಲಿಕ್ಕಿಲ್ಲ. ಇದರ ಸೇವನೆಯಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಕಬ್ಬಿನ ರಸ ಮತ್ತು ಖರ್ಜೂರದ ಮರದ ಸಾಂದ್ರದಿಂದ ತಾಳೆಬೆಲ್ಲ ತಯಾರಾಗುತ್ತದೆ. ಇದರ ತಯಾರಿಕೆ ನೈಸರ್ಗಿಕ ಕಾರ್ಯವಾದ್ದರಿಂದ ಇದು ರಾಸಾಯನಿಕಗಳಿಂದಲೂ ಮುಕ್ತವಾಗಿದೆ. ಇದರ ಸೇವನೆಯಿಂದ ಹಿಮೋಗ್ಲೋಬಿನ್ ಕೊರತೆ ಸಮಸ್ಯೆ ಬಹುಬೇಗ ದೂರವಾಗುತ್ತದೆ.
ಅಧಿಕ ಪೌಷ್ಠಿಕಾಂಶ ಹೊಂದಿರುವ ಇದು ಮೂಳೆಗಳನ್ನು ದೃಢಪಡಿಸುತ್ತದೆ. ಕ್ಯಾಲ್ಸಿಯಂ ಅನ್ನು ಹೆಚ್ಚಿಸಿ, ರೋಗನಿರೋಧಕ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ. ರಕ್ತಸಂಬಂಧಿ ಕಾಯಿಲೆಗಳು ನಿಮ್ಮನ್ನು ಕಾಡದಂತೆ ನೋಡಿಕೊಳ್ಳುತ್ತವೆ.
ಸಕ್ಕರೆ ಬಳಸುವ ಬದಲು ಬೆಲ್ಲ ಸೇವಿಸುವುದರಿಂದ ದೇಹದ ವಿಷಕಾರಿ ಅಂಶಗಳು ದೂರವಾಗುತ್ತವೆ. ಮಧುಮೇಹ ಸಮಸ್ಯೆಯೂ ನಿಯಂತ್ರಣಕ್ಕೆ ಬರುತ್ತದೆ. ತ್ವಚೆಯ ರಕ್ಷಣೆಗೂ ನೆರವಾಗುವ ತಾಳೆ ಬೆಲ್ಲ ಮೊಡವೆಗಳು ಮೂಡದಂತೆ ತಡೆಯುತ್ತವೆ. ಕಪ್ಪು ಕಲೆ ಮತ್ತು ಸುಕ್ಕಿನ ಲಕ್ಷಣಗಳನ್ನೂ ದೂರ ಮಾಡುತ್ತವೆ.