ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ರೊಮೇನಿಯಾದ ಮೇಯರ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪರಿಹಾರ ಶಿಬಿರವೊಂದರಲ್ಲಿ ರೆಕಾರ್ಡ್ ಮಾಡಿರುವ ವಿಡಿಯೋದಲ್ಲಿ, ರೊಮೇನಿಯಾದ ಮೇಯರ್, ಜ್ಯೋತಿರಾಧಿತ್ಯ ಸಿಂಧಿಯಾ ಮಾತಿಗೆ ಅಡ್ಡಿಪಡಿಸಿರೋದು ಸೆರೆಯಾಗಿದೆ.
ವಿದ್ಯಾರ್ಥಿಗಳು ಯಾವಾಗ ಭಾರತಕ್ಕೆ ತಲುಪುತ್ತಾರೆ ಎಂಬುದನ್ನು ಅವರಿಗೆ ವಿವರಿಸಿ. ನಾನು ಆಶ್ರಯ ಒದಗಿಸುತ್ತೇನೆ, ನಾನು ಆಹಾರ ಒದಗಿಸುತ್ತೇನೆ ಮತ್ತು ನಾನು ಅವರಿಗೆ ಸಹಾಯ ಮಾಡಿದ್ದೇನೆ ಅಂತಾ ರೊಮೇನಿಯಾದ ಮೇಯರ್ ಹೇಳಿದ್ದಾರೆ. ಈ ಮಾತಿಗೆ ವಿದ್ಯಾರ್ಥಿಗಳೆಲ್ಲ ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಸಿಂಧಿಯಾ, ನಾನೇನು ಮಾತನಾಡಬೇಕು ಎಂಬುದನ್ನು ನಾನೇ ನಿರ್ಧರಿಸುತ್ತೇನೆ ಎಂದಿದ್ದಾರೆ. ಪರಿಹಾರ ಶಿಬಿರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಿಂಧಿಯಾ, ಅವರನ್ನು ಸ್ಥಳಾಂತರಿಸಲು ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸುತ್ತಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಕಾಂಗ್ರೆಸ್ ಮುಖಂಡರು, ಜ್ಯೋತಿರಾಧಿತ್ಯ ಸಿಂಧಿಯಾರನ್ನು ಟೀಕಿಸಿದ್ದಾರೆ.