ಮಧ್ಯಪ್ರದೇಶದ ರತ್ಲಂ ರೈಲು ನಿಲ್ದಾಣದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ಪ್ರಯಾಣಿಕರು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಗಾರ್ಬಾ ನೃತ್ಯ ಪ್ರದರ್ಶನ ನೀಡಿದ್ದಾರೆ.
ವಾಸ್ತವವಾಗಿ, ಗಾರ್ಬಾ ನೃತ್ಯ ಪ್ರದರ್ಶಿಸಿದ ಪ್ರಯಾಣಿಕರು, ರೈಲು ಆಗಮಿಸುವ ಸಮಯಕ್ಕಿಂತ ಮುಂಚಿತವಾಗಿಯೇ ರತ್ಲಂ ನಿಲ್ದಾಣ ತಲುಪಿದ್ದರು. ಹೀಗಾಗಿ ಪ್ರಯಾಣಿಕರು ರೈಲಿಗೆ ಕಾಯುವ ಬದಲು ಪ್ಲಾಟ್‌ಫಾರ್ಮ್‌ನಲ್ಲಿ ಜಮಾಯಿಸಿ ಕುಣಿದು ಕುಪ್ಪಳಿಸಿದ್ದಾರೆ.
ಬಾಂದ್ರಾ ಟರ್ಮಿನಸ್ – ಹರಿದ್ವಾರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬುಧವಾರ ರಾತ್ರಿ ರತ್ಲಂ ನಿಲ್ದಾಣವನ್ನು ತಲುಪಿತು. ರೈಲು ತನ್ನ ನಿಗದಿತ ಸಮಯಕ್ಕಿಂತ 20 ನಿಮಿಷಗಳ ಮೊದಲು ರತ್ಲಂ ತಲುಪಿತ್ತು, ಆದ್ದರಿಂದ, ಸಮಯಾವಕಾಶ ತುಸು ಹೆಚ್ಚಿತ್ತು. ಹೀಗಾಗಿ ಹಲವಾರು ಪ್ರಯಾಣಿಕರು ರೈಲು ಕೋಚ್‌ನಿಂದ ಇಳಿದು, ಪ್ಲಾಟ್‌ಫಾರ್ಮ್‌ನಲ್ಲಿ ಗಾರ್ಬಾ ಮಾಡಲು ಪ್ರಾರಂಭಿಸಿದ್ರು.
ಮೊದಲಿಗೆ ನಿಲ್ದಾಣದಲ್ಲಿ ಕಾಯುತ್ತಿದ್ದ ಇತರೆ ಪ್ರಯಾಣಿಕರು ಏನೆಂದು ಅರ್ಥವಾಗಿಲ್ಲ. ನಂತರ ಅವರು ಕೂಡ ಮೋಜು-ಮಸ್ತಿಯಲ್ಲಿ ಪಾಲ್ಗೊಂಡು ಸಂಭ್ರಮಪಟ್ಟಿದ್ದಾರೆ. ಈ ಪ್ರದರ್ಶನವನ್ನು ನೋಡುಗರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.