ಬೀದಿ ನಾಯಿಗಳು ರಾತ್ರಿಯಿಡೀ ಬೊಗಳುತ್ತವೆ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಒಂದೆಡೆ ಕಿಡಿಗೇಡಿಗಳು ವಿಷವುಣಿಸಿ ಸಾಯಿಸಿರೋ ಅಮಾನವೀಯ ಘಟನೆ ನಡೆದಿದೆ. ಬೀದಿನಾಯಿಗಳಿಗೆ ಬಿಸಿ ನೀರು ಎರಚುವುದು, ಕೊಲ್ಲುವುದು ಇತ್ಯಾದಿ ಅಮಾನವೀಯ ಘಟನೆಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ. ಇದರ ನಡುವೆ ಇಲ್ಲೊಂದೆಡೆ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.
ರೈಲ್ವೆ ಪ್ಲಾಟ್‌ಫಾರ್ಮ್ ಮೇಲೆ ಮಹಿಳೆಯೊಬ್ಬರು ಕುಳಿತು ಬೀದಿ ನಾಯಿಗೆ ಆಹಾರ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೊವನ್ನು ಏಪ್ರಿಲ್ 24 ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಸಖತ್ ಸದ್ದು ಮಾಡುತ್ತಿದೆ.
ಮಹಿಳೆಯೊಬ್ಬರು ರೈಲ್ವೆ ಪ್ಲಾಟ್‌ಫಾರ್ಮ್ ಮೇಲೆ ಕುಳಿತುಕೊಂಡು ಬೀದಿ ನಾಯಿಗೆ ಬಟ್ಟಲಿನಿಂದ ಮೊಸರನ್ನ ತಿನ್ನಿಸಿದ್ದಾರೆ. ಪಶ್ಚಿಮ ಬಂಗಾಳದ ದಮ್ ದಮ್ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ ಮಹಿಳೆ ತನ್ನ ಕೈಯಾರೆ ನಾಯಿಗೆ ಉಣಿಸಿದ್ದಾಳೆ.
ಪ್ಲಾಟ್‌ಫಾರ್ಮ್ ಮೇಲೆ ಕುಳಿತು ತನ್ನ ಕೈಯಿಂದಲೇ ಬೀದಿ ನಾಯಿಗೆ ಆಹಾರ ನೀಡಿದ್ದಾರೆ. ಈ ನಾಯಿಗೆ ಮೊಸರನ್ನ ಬಿಟ್ಟರೆ ಬೇರೇನೂ ಇಷ್ಟವಿಲ್ಲಂತೆ. ನಾಯಿಗೆ ಕುತುಶ್ ಎಂದು ಹೆಸರಿಡಲಾಗಿದ್ದು, ಅದಕ್ಕೆ ಸುಮಾರು 5 ವರ್ಷ ವಯಸ್ಸಾಗಿದೆ. ಮಹಿಳೆಯು ಶ್ವಾನಕ್ಕೆ ಆಹಾರವನ್ನು ನೀಡಲು ಪ್ರತಿ ದಿನ ಮೂರು ಬಾರಿ ನಿಲ್ದಾಣಕ್ಕೆ ಬರುತ್ತಾಳೆ.
ಬೀದಿನಾಯಿಯ ಬಗ್ಗೆ ಇಷ್ಟೊಂದು ಕಾಳಜಿ ವಹಿಸುತ್ತಿರುವುದಕ್ಕೆ ನೆಟ್ಟಿಗರು ಆ ಮಹಿಳೆಯನ್ನು ಶ್ಲಾಘಿಸಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ತಮ್ಮ ಪ್ರೀತಿಯನ್ನು ಹರಿಸಿದ್ದಾರೆ.